ಬೆಂಗಳೂರು
 ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸದೇ ಯಾವುದೇ ಕಾರಣಕ್ಕೂ ಮಾಧ್ಯಮದವರೊಂದಿಗೆ ಯಾವುದೇ ವಿದ್ಯಾರ್ಥಿಗಳು, ಹಾಗೂ ಸಿಬ್ಬಂದಿ ಸಂಹವನ ನಡೆಸಬಾರದು ಎಂದು ಮೈಸೂರು ವಿವ ಆದೇಶ ಹೊರಡಿಸಿದೆ.
ಯಾವುದೇ ಕಾರಣಕ್ಕಾಗಿ ಕ್ಯಾಂಪಸ್ ನಲ್ಲಿ ನಡೆಯುವ ಪ್ರತಿಭಟನೆಗಳಿಗೆ ಯಾವುದೇ  ಮಾಹಿತಿ ನೀಡಬಾರದೆಂದು ತಿಳಿಸಲಾಗಿದೆ, ಮೈಸೂರು ವಿವಿ ರಿಜಿಸ್ಟ್ರಾರ್ ಪ್ರೊ. ರಾಜಣ್ಣ, 11 ವಿವಿಧ ನಿರ್ಬಂಧವನ್ನು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ವಿವಿ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಅಧಿಕಾರ ರಿಜಿಸ್ಟ್ರಾರ್ ಅವರಿಗೆ ಇಲ್ಲ,  ವಿದ್ಯಾರ್ಥಿಗಳು ಪ್ರತಿಭಟನೆ ನಡೆಸದೇ ಇರುವುದು ಹೇಗೆ, ಆಡಳಿತ ಮಂಡಳಿ ತಪ್ಪು ದಿಕ್ಕಿನಲ್ಲಿದ್ದರೇ ಅವರ ವಿರುದ್ಧ ಧನಿ ಎತ್ತುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಈ ನಿರ್ಧಾರ ಒಪ್ಪುವಂತದಲ್ಲ, ಹೀಗಾಗೀ ಸುತ್ತೊಲೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಮನವೆಂಬರ್ 24 ರಂದುಈ ಸುತ್ತೋಲೆ ಹೊರಡಿಸಲಾಗಿದೆ.

LEAVE A REPLY

Please enter your comment!
Please enter your name here