ರಾಯಚೂರು: ಈಗ ಒಂದು ತಿಂಗಳ ಹಿಂದಷ್ಟೇ ಕಲ್ಲಿದ್ದಿಲು ಸರಬರಾಜಾಗದೆ ಹಲವು ವಿದ್ಯುತ್ ಘಟನೆಗಳನ್ನು ಮುಚ್ಚುವ ಹಂತಕ್ಕೆ ತಲುಪಿತ್ತು. ಇದೀಗ ನೀರಿನ ಅಭಾವದಿಂದಾಗಿ ರಾಯಚೂರಿನ ಆರ್‌ಪಿಎಸ್‌ನಲ್ಲಿ 2 ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಕೃಷ್ಣಾ ನದಿಯಿಂದ ನೀರು ದೊರೆಯದೇ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡು ಘಟಕಗಳು ಗುರುವಾರದಿಂದ ಉತ್ಪಾದನೆ ನಿಲ್ಲಿಸಿವೆ.

ವಿದ್ಯುತ್ ಕೇಂದ್ರದ ಜಾಕ್‌ವೆಲ್ ಬಳಿ ಮಂಗಳವಾರದಿಂದಲೇ ನೀರಿನ ಕೊರತೆ ಕಂಡಿತ್ತು. ನದಿಗೆ ಅಡ್ಡಲಾಗಿಮರಳಿನ ಚೀಲವಿಟ್ಟು ನೀರು ಹರಿಸಿಕೊಳ್ಳುವ ಯಾವ ಯತ್ನವೂ ಫಲನೀಡಲಿಲ್ಲ.

ನಾಲ್ಕು ಪಂಪ್‌ಗಳ ಪೈಕಿ ಒಂದು ಕೆಲಸ ಮಾಡುತ್ತಿದೆ. ನೀರು ಬಹುತೇಕ ಬತ್ತಿದೆ. ಇದೀಗ ಒಟ್ಟು ನಾಲ್ಕು ಘಟಕಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಂತಾಗಿದೆ. 1720 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥ್ಯದ ಪೈಕಿ 650 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಬ ಮಾಹಿತಿ ಲಭ್ಯವಾಗಿದೆ.

Summary
ವಿದ್ಯುತ್ ಘಟನೆಗಳನ್ನು ಮುಚ್ಚುವ ಹಂತಕ್ಕೆ ತಲುಪಿತ್ತು.
Article Name
ವಿದ್ಯುತ್ ಘಟನೆಗಳನ್ನು ಮುಚ್ಚುವ ಹಂತಕ್ಕೆ ತಲುಪಿತ್ತು.
Description
ಈಗ ಒಂದು ತಿಂಗಳ ಹಿಂದಷ್ಟೇ ಕಲ್ಲಿದ್ದಿಲು ಸರಬರಾಜಾಗದೆ ಹಲವು ವಿದ್ಯುತ್ ಘಟನೆಗಳನ್ನು ಮುಚ್ಚುವ ಹಂತಕ್ಕೆ ತಲುಪಿತ್ತು. ಇದೀಗ ನೀರಿನ ಅಭಾವದಿಂದಾಗಿ ರಾಯಚೂರಿನ ಆರ್‌ಪಿಎಸ್‌ನಲ್ಲಿ 2 ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಕೃಷ್ಣಾ ನದಿಯಿಂದ ನೀರು ದೊರೆಯದೇ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡು ಘಟಕಗಳು ಗುರುವಾರದಿಂದ ಉತ್ಪಾದನೆ ನಿಲ್ಲಿಸಿವೆ. ವಿದ್ಯುತ್ ಕೇಂದ್ರದ ಜಾಕ್‌ವೆಲ್ ಬಳಿ ಮಂಗಳವಾರದಿಂದಲೇ ನೀರಿನ ಕೊರತೆ ಕಂಡಿತ್ತು. ನದಿಗೆ ಅಡ್ಡಲಾಗಿಮರಳಿನ ಚೀಲವಿಟ್ಟು ನೀರು ಹರಿಸಿಕೊಳ್ಳುವ ಯಾವ ಯತ್ನವೂ ಫಲನೀಡಲಿಲ್ಲ.

LEAVE A REPLY

Please enter your comment!
Please enter your name here