ಕೊಡಗು

ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ (ಬೀಮವಾದದ)ಯ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯನ್ನು ಕುಶಾಲನಗರದ ಟೌನ್ ಕಾಲೋನಿಯಲ್ಲಿ ಆಚರಿಲಾಯಿತು. ಟೌನ್ ಕಾಲೋನಿಯ ಅಂಬೇಡ್ಕರ್ ಭವನದಲ್ಲಿ ನಡೆದ‌ ಕಾರ್ಯಕ್ರಮವನ್ನು ಗಣ್ಯರು ದೀಪಬೆಳಗುವ ಮೂಲಕ‌ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸ್ಥಳೀಯ ಮುಖಂಡ ಮಹದೇವ್ ಇಂದಿನ ದಿನವನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಂಡು ,ಬಾಬಾ ಸಾಹೇಬರ ಮಾರ್ಗದರ್ಶನದಲ್ಲಿ ನಡೆಯಬೇಕೆಂದರು.


ಪಟ್ಟಣ ಪಂಚಾಯ್ತಿ ಸದಸ್ಯ ಜಯವರ್ಧನ ಮಾತನಾಡಿ, ಈ ದೇಶದ ನ್ಯೂನತೆಗಳನ್ನು ಸರಿಪಡಿಸಿ ಇಡೀ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದರು. ಡಾ. ಬಿ ಆರ್ ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅವರು ವಿಶ್ಚ ನಾಯಕರು ಎಂದರು.
ಡಿಎಸ್ ಎಸ್‌ ಜಿಲ್ಲಾಧ್ಯಕ್ಷ ಕೆ‌.ಬಿ ರಾಜು ಮಾತನಾಡಿ, ಅಂಬೇಡ್ಕರ್ ಕಂಡ ಕನಸು ನನಸಾಗಬೇಕು‌ ಆ ನಿಟ್ಟಿನಲ್ಲಿ ನಾವು ಮುಂದುವರೆಯಬೇಕು. ಸಂವಿಧಾನದ ಪ್ರತಿಯನ್ನೆ ಸುಡುವ ಪ್ರವೃತ್ತಿ ಕಿಡಿಗೇಡಿಗಳಿಂದ ನಡೆಯುತ್ತಿದೆ. ಅಲ್ಲದೆ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮರೆಯಾಗುತ್ತಿದೆ.
ಇವುಗಳನ್ನ ನಿಯಂತ್ರಿಸಬೇಕೆಂದರು.
ದಲಿತ ಸಂಘರ್ಷ ಸಮಿತಿಯ ಹೋಬಳಿ ಅಧ್ಯಕ್ಷ ಕೀರ್ತಿರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ದ.ಸಂ.ಸ. ಮಹಿಳಾ ಘಟಕದ ಅಧ್ಯಕ್ಷೆ ಶುಭ, ಆರ್.ಪಿ.ಐ ಮುಖಂಡ ಪೂವಯ್ಯ, ಸ್ಥಳೀಯರಾದ ಜಯಪ್ರಕಾಶ್, ಮುರುಳಿ, ಪ್ರಕಾಶ್, ಪುನೀತ್ ರಾಜ್, ಆನಂದ್, ಶಶಿ, ಮತ್ತಿತರರು ಹಾಜರಿದ್ದರು.

:

LEAVE A REPLY

Please enter your comment!
Please enter your name here