ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಶೃಂಗೇರಿಯಲ್ಲಿ ಪ್ರತ್ಯಂಗಿರಾ ಹೋಮ ನಡೆಸುತ್ತಿದ್ದಾರೆ. ಶುಕ್ರವಾರ ಶೃಂಗೇರಿ ಮಠದ ಆವರಣದ ಶಕ್ತಿ ಗಣಪತಿ ಪ್ರದೋಷ ಕಾರ್ಯಾಲಯದಲ್ಲಿ ಹೋಮ ನಡೆಸಲಾಗುತ್ತಿದೆ. 

ಪುರೋಹಿತರಿಂದ ಬೆಳಗ್ಗೆ 6.30 ಕ್ಕೆ ಹೋಮ ಆರಂಭವಾಗಿದ್ದು, ದೇವಾಲಯ ಒಳಭಾಗದಲ್ಲಿರುವ ಪ್ರದೋಷ ಕಾರ್ಯಾಲಯದಲ್ಲಿ ವೈದಿಕ ವಿಧಿವಿಧಾನ ನೆರವೇರಿಸಲಾಗುತ್ತಿದೆ. ಗುರುವಾರ ರಾತ್ರಿ ತಾಯಿಯ ಬಳಿ ಸಿಎಂ ಕುಮಾರಸ್ವಾಮಿ ಹೋಮದ ಸಂಕಲ್ಪ ಮಾಡಿಸಿದ್ದರು. 

ಆರೋಗ್ಯ ವೃದ್ಧಿ, ಶತ್ರು ನಾಶ ಕುರಿತು ನಡೆಯುತ್ತಿರುವ ಸಿಎಂ ಪ್ರತ್ಯಂಗಿರಾ ಹೋಮ ನಡೆಸುತ್ತಿದ್ದು, ಯಾಗದ ಪೂರ್ಣಾಹುತಿವರೆಗೂ ಕುಮಾರಸ್ವಾಮಿ ವ್ರತದಲ್ಲಿರುತ್ತಾರೆ. 

ಶೃಂಗೇರಿಗೆ ಭಕ್ತನಾಗಿ ಬಂದಿದ್ದೇನೆ, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಗುರುವಾರ ಸಂಜೆ ಮಠಕ್ಕೆ ಆಗಮಿಸಿದ್ದ ಸಿಎಂ ಹೇಳಿಕೆ ನೀಡಿದ್ದರು. 

LEAVE A REPLY

Please enter your comment!
Please enter your name here