ಮೈಸೂರು: ನಾವು ಯಾವುದೇ ಸಭೆ ಮಾಡಿಲ್ಲ. ನಿಖಿಲ್ ಕುಮಾರಸ್ವಾಮಿ ಅವರ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದೆವು. ಆಪರೇಷನ್ ಶಬ್ದವನ್ನೇ ತೆಗೆದುಬಿಡಿ ಎಂದು ಸಚಿವ ಎಂ.ಸಿ.ಮನಗೊಳಿ ಹೇಳಿದ್ದಾರೆ.

ಜಲಮಹಲ್ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 5 ವರ್ಷ ಸರ್ಕಾರ ನಡೆಸುತ್ತೇವೆ. ಸುಮ್ಮನೆ ಜನರನ್ನು ದಿಕ್ಕು ತಪ್ಪಿಸಿ ಮನಸ್ಸು ಚಂಚಲ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ನಮಗೆ 5 ವರ್ಷ ಯಾವುದೇ ಭಯ ಇಲ್ಲ. ನಮ್ಮ ಸರ್ಕಾರ ತುಂಬಾ ಸ್ಟ್ರಾಂಗ್ ಆಗಿದೆ ಎಂದು ತಿಳಿಸಿದರು.

ನಿನ್ನೆಯ ಕಾರ್ಯಕ್ರಮಕ್ಕೆ ಜೆಡಿಎಸ್‌ನ ಎಲ್ಲ ಪ್ರಮುಖರೂ ಬಂದಿದ್ದರು. ನಮ್ಮ ಸರ್ಕಾರ ಅಭದ್ರ ಮಾಡಲು ಬಿಜೆಪಿ ಮುಂದಾಗಿದ್ದಾರೆ. ಆದರೆ ನಮ್ಮ ಸರ್ಕಾರ ಅಭದ್ರ ಅಲ್ಲ, ಸುಭದ್ರವಾಗಿದೆ. ದೇಶ ಹಾಗೂ ರಾಜ್ಯ ತುಂಬಾ ದೊಡ್ಡದಿದೆ. ಯಾರು ಏನು ಬೇಕಾದರೂ ಅಧ್ಯಯನ ಮಾಡಿಕೊಳ್ಳಲಿ. ನಾವು ಸರ್ಕಾರದಿಂದ ಬರ ಅಧ್ಯಯನ ಮಾಡುತ್ತೇವೆ. ಜನರ ಬೇಕು – ಬೇಡ ಈಡೇರಿಸುತ್ತೇವೆ ಎಂದು ಹೇಳಿದರು.

Summary
 ಸರ್ಕಾರ ಅಭದ್ರಕ್ಕೆ ಬಿಜೆಪಿ ಪ್ರಯತ್ನ, ನಮ್ಮ ಸರ್ಕಾರ ಸ್ಟ್ರಾಂಗ್‌
Article Name
ಸರ್ಕಾರ ಅಭದ್ರಕ್ಕೆ ಬಿಜೆಪಿ ಪ್ರಯತ್ನ, ನಮ್ಮ ಸರ್ಕಾರ ಸ್ಟ್ರಾಂಗ್‌
Description
ಜಲಮಹಲ್ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 5 ವರ್ಷ ಸರ್ಕಾರ ನಡೆಸುತ್ತೇವೆ. ಸುಮ್ಮನೆ ಜನರನ್ನು ದಿಕ್ಕು ತಪ್ಪಿಸಿ ಮನಸ್ಸು ಚಂಚಲ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ನಮಗೆ 5 ವರ್ಷ ಯಾವುದೇ ಭಯ ಇಲ್ಲ. ನಮ್ಮ ಸರ್ಕಾರ ತುಂಬಾ ಸ್ಟ್ರಾಂಗ್ ಆಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here