ಬೆಂಗಳೂರು: ಊಹಾಪೋಹಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ಕೆಲಸ ಮಾಡೋದು ನನಗೆ ಗೊತ್ತಿದೆ ಅಂತಾ ನಟ ಯಶ್​ ಹೇಳಿದ್ದಾರೆ.
ಸತತ 2 ಗಂಟೆ ಕಾಲ ಐಟಿ ವಿಚಾರಣೆ ಬಳಿಕ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಅಷ್ಟು ದುಡ್ಡು ಸಿಕ್ಕಿದೆ ಎನ್ನುವುದು ಸುಳ್ಳು. ನಮ್ಮ ಮನೆಯಲ್ಲಿ ಎಷ್ಟು ಕೋಟಿ ಸಿಕ್ಕಿದೆ ಅನ್ನೋ ಮಾಹಿತಿ ನಿಮಗೆ ಇದೆಯಾ..? ನನಗೆ 17 ಬ್ಯಾಂಕ್​ಗಳಲ್ಲಿ ಲೋನ್ ಆಗಿದೆ. ಲೋನ್ ಆಗಿದೆ ಅಂದ್ರೆ ನಾನು ಸರಿಯಾಗಿ ತೆರಿಗೆ ಪಾವತಿಸಿದ್ದೀನಿ ಅಂತಾ ಅರ್ಥ. 2 ವರ್ಷಗಳವರೆಗೂ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೆ ವಿಚಾರಣೆಗೆ ಕರೆದ್ರೆ ಹಾಜರಾಗುತ್ತೇನೆ ಅಂತಾ ಹೇಳಿದರು. ಇದೇ ವೇಳೆ, ₹40 ಕೋಟಿ ಸಾಲ ಇಲ್ಲ, ಇವೆಲ್ಲಾ ಭಾರೀ ಊಹಾಪೋಹ. ಈ ತರಹ ಸಾಲ ಇದ್ರೆ ನನಗೆ ಯಾರಾದ್ರೂ ಲೋನ್ ಕೊಡ್ತಾರಾ..? ಅಂತಾ ಯಶ್​​ ಕೇಳಿದರು.

Summary
ಸಾಲ ಇದೆ ಅಂದ್ಮೇಲೆ ನನ್ನ ಲೆಕ್ಕ ಸರಿಯಿದೆ ಅಂತಾನೇ ಅಲ್ವಾ? Yash ಪ್ರಶ್ನೆ?
Article Name
ಸಾಲ ಇದೆ ಅಂದ್ಮೇಲೆ ನನ್ನ ಲೆಕ್ಕ ಸರಿಯಿದೆ ಅಂತಾನೇ ಅಲ್ವಾ? Yash ಪ್ರಶ್ನೆ?

LEAVE A REPLY

Please enter your comment!
Please enter your name here