ತುಮಕೂರು, ಡಿಸೆಂಬರ್ 05: ಸಿದ್ದಗಂಗಾ ಶ್ರೀಗಳ ಆರೋಗ್ಯ ಮತ್ತೆ ಹದಗೆಟ್ಟಿದೆ, ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸಿದ್ದಗಂಗಾ ಶ್ರೀಗಳು ಮೊನ್ನೆಯಷ್ಟೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು ಆದರೆ ಆ ನಂತರ ಚಿಕಿತ್ಸೆ ಬಳಿಕ ಮತ್ತೆ ಮಠಕ್ಕೆ ವಾಪಸ್ಸಾಗಿದ್ದರು.

ಸಿದ್ದಗಂಗಾ ಶ್ರೀಗಳಿಗೆ ಕೇವಲ ಜ್ವರ ಬಂದಿದೆ ಅಷ್ಟೆ ಬೇರೆ ಏನೂ ಸಮಸ್ಯೆ ಇಲ್ಲವೆಂದು ಮಠದ ಮೂಲಗಳು ತಿಳಿಸಿವೆ. ಡಾ.ಪರಮೇಶ್ವರ್ ಅವರ ನೇತೃತ್ವದಲ್ಲಿ ತುಮಕೂರಿನ ಹಳೆಯ ಮಠದಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಬೆಂಗಳೂರಿನಿಂದ ಶ್ರೀಗಳ ಖಾಸಗಿ ವೈದ್ಯ ವೆಂಕಟರಮಣ ಅವರು ತುಮಕೂರಿನತ್ತ ತೆರಳುತ್ತಿದ್ದಾರೆ. ಶ್ರೀಗಳ ರಕ್ತ ಪರೀಕ್ಷೆ ನಡೆಸುತ್ತಿದ್ದು, ವರದಿ ಬಂದ ನಂತರ ಶ್ರೀಗಳ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ಹೊರಬೀಳಲಿದೆ. ಸಂಜೆ ತಿರುಗಾಟಕ್ಕೆಂದು ಹೋಗಿದ್ದರು ಬಂದಾಗ ಆಯಾಸ ಆಗಿದೆ ಈಗ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ತುಮಕೂರು ಎಸ್‌ಪಿ ದಿವ್ಯಗೋಪಿನಾಥ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here