ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯರು ಸಂಭಾವನೆ ತಾರತಮ್ಯ ವಿಚಾರ ಬಹುದಿನಗಳಿಂದ ಚರ್ಚೆಯಲ್ಲಿದೆ. ಹೀರೋಗಳಿಗೆ ಕೊಡೊವಷ್ಟೇ ಹೀರೋಯಿನ್ ಗಳಿಗೂ ಸಂಭಾವನೆ ಕೊಡಿ ಎಂದು ಅನೇಕ ನಟಿಯರು ಕೇಳಿದ್ದಾರೆ. ಹೀಗೆ, ಸಂಭಾವನೆ ವಿಷ್ಯದಲ್ಲಿ ಸುದ್ದಿಯಾಗಿದ್ದ ನಟಿಯರ ಮಧ್ಯೆ ಸಂಭಾವನೆಯೇ ಬೇಡ ಎಂಬ ನಟಿಯೊಬ್ಬರು ಈಗ ಸುದ್ದಿಯಾಗಿದ್ದಾರೆ.

ಹೌದು, ತೆಲುಗು ನಟಿ ಸಾಯಿ ಪಲ್ಲವಿ ಸಂಭಾವನೆ ವಿಚಾರದಲ್ಲಿ ಸಭ್ಯತೆಯಿಂದ ನಡೆದುಕೊಂಡಿದ್ದಾರೆ. ತಾವು ಅಭಿನಯಿಸಿದ್ದ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಸೋಲು ಕಂಡ ಪರಿಣಾಮ, ನಿರ್ಮಾಪಕರಿಗೆ ನೆರವಾಗಿದ್ದಾರೆ.

ಈ ಚಿತ್ರದ ನಟನೆಗಾಗಿ ಬರಬೇಕಿದ್ದ ಅರ್ಧ ಸಂಭಾವನೆಯನ್ನ ನಿರ್ಮಾಪಕರಿಗೆ ಬಿಟ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸದ್ಯ ದಕ್ಷಿಣದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸಾಯಿಪಲ್ಲವಿ ಇತರೆ ಹೀರೋಯಿನ್ ಗಳಿಗೆ ಮಾದರಿಯಾಗಿದ್ದಾರೆ. .

ಶಾರ್ವಾನಂದ್ ಮತ್ತು ಸಾಯಿ ಪಲ್ಲವಿ ಅಭಿನಯಿಸಿದ್ದ ‘ಪಡಿ ಪಡಿ ಲೇಚೇ ಮನಸ್ಸು’ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗಿಯತ್ತು. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಅಷ್ಟಾಗಿ ಪರಿಣಾಮ ಬೀರಿಲ್ಲ. ನಿರ್ಮಾಪಕರಿಗೆ ನಷ್ಟವಾಗಯಿತು. ಸಿನಿಮಾ ಫ್ಲಾಫ್ ಆಯಿತು.

Summary
ಸಿನಿಮಾ ಸೋತಿದ್ದಕ್ಕೆ ಸಾಯಿ 'ಪಲ್ಲವಿ' ಮಾಡಿದ್ದೇನು ಗೊತ್ತಾ..?
Article Name
ಸಿನಿಮಾ ಸೋತಿದ್ದಕ್ಕೆ ಸಾಯಿ 'ಪಲ್ಲವಿ' ಮಾಡಿದ್ದೇನು ಗೊತ್ತಾ..?

LEAVE A REPLY

Please enter your comment!
Please enter your name here