ಮುಂಬೈ: ಉದ್ಯಮಿ ಮುಕೇಶ್​ ಅಂಬಾನಿ ಹಾಗೂ ನಿತಾ ಅಂಬಾನಿ ಹಿರಿಯ ಪುತ್ರ ಆಕಾಶ್​ ಅಂಬಾನಿ ವಿವಾಹ ಇತ್ತೀಚೆಗಷ್ಟೇ ಶ್ಲೋಕಾ ಮೆಹ್ತಾ ಅವರೊಂದಿಗೆ ನೆರವೇರಿದೆ. ಈಗ ಈ ದಂಪತಿ ತಮ್ಮ ಮಗನ ಮದುವೆ ಸಂಭ್ರಮವನ್ನು ಸೈನಿಕರೊಂದಿಗೆ ಸೇರಿ ಆಚರಿಸಿದ್ದು ವಿಶೇಷವೆನಿಸಿದೆ.

ಇತ್ತೀಚೆಗಷ್ಟೇ ಹೊಸದಾಗಿ ತೆರೆಯಲಾಗಿರುವ ಧೀರುಬಾಯಿ ಅಂಬಾನಿ ಸ್ಕ್ವಾರ್​ನಲ್ಲಿ ಭೂಸೇನೆ, ಅರೆಸೈನಿಕ ಪಡೆ, ಮುಂಬೈ ಪೊಲೀಸ್​, ರೈಲ್ವೆ ರಕ್ಷಣಾ ಫೋರ್ಸ್​ನ ಸಾವಿರಾರು ಸಿಬ್ಬಂದಿ ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿದ ಮುಕೇಶ್​ ಅಂಬಾನಿ ಹಾಗೂ ನಿತಾ ಅಂಬಾನಿ ಸಂಭ್ರಮ ಆಚರಿಸಿದರು.

ನಂತರ ಮಾತನಾಡಿದ ನಿತಾ ಅಂಬಾನಿ, ನಮ್ಮ ದೇಶ, ನಗರವನ್ನು ರಕ್ಷಣೆ ಮಾಡುತ್ತಿರುವವರನ್ನು ಭೇಟಿ ನೀಡಿದ್ದು ತುಂಬ ಸಂತೋಷವೆನಿಸಿದೆ. ಅವರೆಲ್ಲರ ಬಗ್ಗೆ ಹೆಮ್ಮೆ ಎನಿಸುತ್ತದೆ. ನಮ್ಮ ಪಾಲಿಗೆ ಇದೊಂದು ಆನಂದಾತ್ಮಕ ಹಾಗೂ ಭಾವನಾತ್ಮಕ ಸನ್ನಿವೇಶ. ಇವರೆಲ್ಲ ನಿಜವಾದ ಹೀರೋಗಳಾಗಿದ್ದು, ಆಕಾಶ್​ ಮತ್ತು ಶ್ಲೋಕಾಗೆ ಆಶೀರ್ವದಿಸಿ, ಹಾರೈಸಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು

ಭದ್ರತಾ ಪಡೆಗಳು ನಮ್ಮ ಕುಟುಂಬವಿದ್ದಂತೆ. ನಮ್ಮನ್ನೆಲ್ಲ ರಕ್ಷಿಸುವ ಇವರ ಬಗ್ಗೆ ತುಂಬು ಹೃದಯದ ಗೌರವ ಮತ್ತು ಕೃತಜ್ಞತೆ ಇದೆ. ಇವರೆಲ್ಲರ ಜತೆ ಸಮಯ ಕಳೆದಿದ್ದು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.

ನೀತಾ ಅಂಬಾನಿಯವರ ಪರಿಕಲ್ಪನೆಯಲ್ಲಿ ನಡೆದ ಕೃಷ್ಣನ ರಾಸಲೀಲೆ ಕತೆಗಳನ್ನೊಳಗೊಂಡ ಅನಂತ ಪ್ರೇಮ ಎಂಬ ಹೆಸರಿನ ಸಂಗೀತ ಕಾರ್ಯಕ್ರಮ ಈ ಸಮಾರಂಭದ ಮುಖ್ಯ ಆಕರ್ಷಣೆಯಾಗಿತ್ತು.

LEAVE A REPLY

Please enter your comment!
Please enter your name here