ಚಿಂತಾಮಣಿ ಗ್ರಾಮಾಂತರ: ಕೇಂದ್ರ ಸರಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಭಾರತ್‌ ಬಂದ್‌ನಲ್ಲಿ ಎರಡನೇ ದಿನವಾದ ಬುಧವಾರ ಹಲವು ಕಾರ್ಮಿಕ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು, ಪ್ರತಿಭಟನೆ ನಡೆಸಿದರು.

ತಾಲೂಕಿನ ಚಿನ್ನಸಂದ್ರದ ಬಳಿ ಹಾದುಹೋಗುವ ಕಡಪ-ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯ ಬಳಿ ಜಮಾಯಿಸಿದ ಸಿಐಟಿಯು, ಗ್ರಾಮ ಪಂಚಾಯಿತಿ ಆಸಂಘಟಿತ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಹಾಸ್ಟೆಲ್‌ ಹೊರಗುತ್ತಿಗೆ ನೌಕರರು, ಮಾದಿಗ ದಂಡೋರ ಮೀಸಲು ಹೋರಾಟ ಸಮಿತಿ ಪದಾಧಿಕಾರಿಗಳು ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರಕಾರದ ಕಾರ್ಮಿಕ, ರೈತ ವಿರೋಧಿ ನೀತಿಯನ್ನು ಖಂಡಿಸಿ ಹೆದ್ದಾರಿ ರಸ್ತೆ ತಡೆ ಮಾಡಿ, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಕಾಲ ಹೆದ್ದಾರಿ ರಸ್ತೆ ತಡೆ ಮಾಡಿ, ಪ್ರತಿಭಟನೆ ನಡೆಸಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

ಬಿಗಿ ಬಂದೋಬಸ್ತ್‌: ಪ್ರತಿಭಟನೆ ಸಮಯದಲ್ಲಿ ಹೆದ್ದಾರಿ ರಸ್ತೆಯಲ್ಲಿ ಯಾವುದೇ ರೀತಿಯ ಆಹಿತಕರ ಘಟನೆಗಳು ನಡೆಯದಂತೆ ಚಿಂತಾಮಣಿ ನಗರಠಾಣೆಯ ಆರಕ್ಷ ಕ ವೃತ್ತ ನೀರಿಕ್ಷ ಕ ನಾರಾಯಣಸ್ವಾಮಿ ಹಾಗೂ ಗ್ರಾಮಾಂತರ ಠಾಣೆಯ ಪಿಎಸೈ ಜಗದೀಶ್ವರ ರೆಡ್ಡಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ನಾಗರಾಜು, ಎಎಸ್‌ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಎಂ.ವಿ ರಾಮಪ್ಪ, ಸಿಐಟಿಯು ಕಾರ್ಯದರ್ಶಿ ಎಚ್‌.ಜಿ ಲಕ್ಷ್ಮಿನರಸಮ್ಮ, ಚಂದ್ರಮ್ಮ, ಸರಸ್ವತಮ್ಮ, ಸಾವಿತ್ರಮ್ಮ, ಅಲುವೇಲಮ್ಮ, ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ಸಂಘದ ಪಿ.ಎಂ ನಾರಾಯಣಸ್ವಾಮಿ, ರಘುನಾಥ ರೆಡ್ಡಿ, ದೇವಮ್ಮ, ನರಸಮ್ಮ, ಕವಿತಾ, ಅಂಗನವಾಡಿ, ಸಿಐಟಿಯು ಕಾರ್ಯಕರ್ತೆಯರು ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲೊಂಡಿದ್ದರು.

Summary
ಹಲವು ಕಾರ್ಮಿಕ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು, ಪ್ರತಿಭಟನೆ ನಡೆಸಿದರು.
Article Name
ಹಲವು ಕಾರ್ಮಿಕ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು, ಪ್ರತಿಭಟನೆ ನಡೆಸಿದರು.
Description
ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ನಾಗರಾಜು, ಎಎಸ್‌ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಎಂ.ವಿ ರಾಮಪ್ಪ, ಸಿಐಟಿಯು ಕಾರ್ಯದರ್ಶಿ ಎಚ್‌.ಜಿ ಲಕ್ಷ್ಮಿನರಸಮ್ಮ, ಚಂದ್ರಮ್ಮ, ಸರಸ್ವತಮ್ಮ, ಸಾವಿತ್ರಮ್ಮ, ಅಲುವೇಲಮ್ಮ, ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ಸಂಘದ ಪಿ.ಎಂ ನಾರಾಯಣಸ್ವಾಮಿ, ರಘುನಾಥ ರೆಡ್ಡಿ, ದೇವಮ್ಮ, ನರಸಮ್ಮ, ಕವಿತಾ, ಅಂಗನವಾಡಿ, ಸಿಐಟಿಯು ಕಾರ್ಯಕರ್ತೆಯರು ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲೊಂಡಿದ್ದರು. 

LEAVE A REPLY

Please enter your comment!
Please enter your name here