ಹಳಿಯಾಳ: ಮಹತ್ವಾಕಾಂಕ್ಷಿ ಕಾಳಿ ನೀರಾವರಿ ಯೋಜನೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಯಲ್ಲಿ ವಿಳಂಬ ಆಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಾಕೀತು ಮಾಡಿದರು.

ಪಟ್ಟಣದ ಇಂಜನಿಯರಿಂಗ್ ಕಾಲೇಜ್ ಎದುರಿನ ಖಾಸಗಿ ಜಮೀನಿನಲ್ಲಿ ಆರಂಂಭಗೊಂಡಿರುವ ಕಾಳಿನದಿ ನೀರಾವರಿ ಯೋಜನೆಯ ಪೈಪ್ ನಿರ್ಮಾಣ ಮತ್ತು ಅಳವಡಿಕೆ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ಮಾನವ ಸಂಪನ್ಮೂಲ ಹೆಚ್ಚು ಬಳಸಿಕೊಂಡು ಕಾಮಗಾರಿಯನ್ನು ಬೇಗ ಕಾಮಗಾರಿ ಪೂರ್ಣಗಳಿಸುವಂತೆ ಗುತ್ತಿಗೆ ಪಡೆದ ಕಂಪನಿಯ ಮುಖ್ಯಸ್ಥರು ಹಾಗೂ ಯೋಜನೆಯ ಮೇಲ್ವಿಚಾರಣೆ ಹೊಂದಿರುವ ರಾಜ್ಯ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಕ್ಷೇತ್ರದ ರೈತರು ಈ ಯೋಜನೆಯ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದು, ಕಾಮಗಾರಿ ಅನುಷ್ಠಾನದಲ್ಲಿ ಕಾಳಜಿ ವಹಿಸಬೇಕು ಎಂದರು.

ಕಾಳಿನದಿ ಯೋಜನೆ ಕಾಮಗಾರಿ ಗುತ್ತಿಗೆ ಪಡೆದಿರುವ ಪಿವಿಆರ್ ಕಂಪನಿ ಹಾಗೂ ಕೊಲ್ಲಾಪುರದ ಲಕ್ಷ್ಮೀ ಸಿವಿಲ್ ಇಂಜಿನಿಯರಿಂಗ್ ಸರ್ವಿಸ್ ಕಂಪನಿಯ ತಂತ್ರಜ್ಞರು, ನೀರಾವರಿ ನಿಗಮದ ಅಧಿಕಾರಿಗಳು, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸದಸ್ಯ ಕೃಷ್ಣ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ತಾಲೂಕು ಅನುಷ್ಠಾನ ಅಧಿಕಾರಿಗಳು ಪಾಲ್ಗೊಂಡಿದ್ದರು.

ಏನಿದು ಯೋಜನೆ? ಕಾಳಿನದಿ ನೀರಾವರಿ ಯೋಜನೆಗೆ 220.35 ಕೋ.ರೂ. ಅನುದಾನ ಮಂಜೂರಾಗಿದ್ದು, ಯೋಜನೆಯಡಿ 46 ಕೆರೆ ಹಾಗೂ 19 ಬಾಂದಾರುಗಳನ್ನು ಕಾಳಿ ನದಿಯಿಂದ ತುಂಬಿಸಲಾಗುವುದು. ಡಿಸೆಂಬರ್ ತಿಂಗಳ ನಂತರ ಹಳಿಯಾಳ ಕೃಷಿ ಚಟುವಟಿಕೆಗೆ ಎದುರಾಗುವ ನೀರಿನ ಕೊರತೆ ನೀಗಿಸುವ ಉದ್ದೇಶವಿದೆ. ಜನವರಿಯಿಂದ ಮೇ ತಿಂಗಳವರೆಗೆ ಅಂದಾಜು 153 ದಿನಗಳವರೆಗೆ 0.812 ಟಿಎಂಸಿ ನೀರು ಬಳಸಲಾಗುವುದು. ಇದರಿಂದ ತಾಲೂಕಿನ 17,000 ಎಕರೆ ಕೃಷಿ ಭೂಮಿಗೆ ನೀರಾವರಿ ಪ್ರಯೋಜನ ದೊರಕಲಿದೆ. ಸದ್ಯ ಕಾಳಿ ಯೋಜನೆಯ ಕಾರ್ಯ ಮೂರು ಹಂತದಲ್ಲಿ ಆರಂಭಗೊಂಡಿದೆ. ಪಟ್ಟಣದ ಬಸರಿಕಟ್ಟಿ ಖಾಸಗಿ ಜಮೀನಿನಲ್ಲಿ ಯೋಜನೆಗೆ ಬಳಸಲ್ಪಡುವ ಬೃಹತ್ ಗಾತ್ರದ ಪೈಪ್​ಗಳ ನಿರ್ಮಾಣ ಕಾರ್ಯ ನಡೆದಿದೆ. ಕಾಳಿನದಿ ನೀರನ್ನು ಕೆರೆಗಳಿಗೆ ತುಂಬಿಸಲು 13 ಕಿ.ಮೀ. ಉದ್ದ ಪೈಪ್​ಗಳನ್ನು ಅಳವಡಿಸಲಾಗುತ್ತಿದೆ.

Summary
ಹಳಿಯಾಳ : ಕಾಳಿ ನೀರಾವರಿ ಕಾಮಗಾರಿ ಬೇಗ ಪೂರ್ಣಗೊಳಿಸಿ !
Article Name
ಹಳಿಯಾಳ : ಕಾಳಿ ನೀರಾವರಿ ಕಾಮಗಾರಿ ಬೇಗ ಪೂರ್ಣಗೊಳಿಸಿ !
Description
ಪಟ್ಟಣದ ಬಸರಿಕಟ್ಟಿ ಖಾಸಗಿ ಜಮೀನಿನಲ್ಲಿ ಯೋಜನೆಗೆ ಬಳಸಲ್ಪಡುವ ಬೃಹತ್ ಗಾತ್ರದ ಪೈಪ್​ಗಳ ನಿರ್ಮಾಣ ಕಾರ್ಯ ನಡೆದಿದೆ. ಕಾಳಿನದಿ ನೀರನ್ನು ಕೆರೆಗಳಿಗೆ ತುಂಬಿಸಲು 13 ಕಿ.ಮೀ. ಉದ್ದ ಪೈಪ್​ಗಳನ್ನು ಅಳವಡಿಸಲಾಗುತ್ತಿದೆ.

LEAVE A REPLY

Please enter your comment!
Please enter your name here