ಬೆಂಗಳೂರು : ಫಸ್ಟ್​ಲುಕ್ ಪೋಸ್ಟರ್ ಹೊರಬರಲಿದೆ. ಬಹುವರ್ಷಗಳ ಬಳಿಕ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ಅವರ ಲುಕ್ ಬಗ್ಗೆ ಕುತೂಹಲ ಮನೆ ಮಾಡಿದೆ. ನಿರ್ವಪಕ ವಿಜಯ್ ಕಿರಗಂದೂರು ‘ಯುವರತ್ನ’ಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇನ್ನು, ‘ಭರ್ಜರಿ’ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಮತ್ತು ಪುನೀತ್ ಕಾಂಬಿನೇಷನ್​ನಲ್ಲಿ ‘ಜೇಮ್್ಸ’ ಚಿತ್ರ ಮೂಡಿಬರಲಿದೆ. ಅದರ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಲಿದೆ. ಈಗಾಗಲೇ ‘ನಟಸಾರ್ವಭೌಮ’ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಶೀರ್ಷಿಕೆ ಗೀತೆಯನ್ನೂ ಜನರು ಇಷ್ಟಪಟ್ಟಿದ್ದಾರೆ. ಈಗ ಅದೇ ಹಾಡಿಗೆ ಹೊಸ ಸಾಹಿತ್ಯ ಬರೆದಿದ್ದಾರೆ ನಿರ್ದೇಶಕ ಪವನ್ ಒಡೆಯರ್. ಈವರೆಗಿನ ಪುನೀತ್ ವೃತ್ತಿಬದುಕಿನ ಕುರಿತಾಗಿ ಸಾಲು ಗಳನ್ನು ಬರೆಯಲಾಗಿದ್ದು, ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಅವರದ್ದು. ಈ ಎಲ್ಲ ವಿಶೇಷಗಳ ಕಾರಣದಿಂದ ಈ ಬಾರಿಯ ‘ಪವರ್ ಸ್ಟಾರ್’ ಹುಟ್ಟುಹಬ್ಬದ ರಂಗು ಹೆಚ್ಚಿದೆ. ಇಂದು ಅವರು 44ನೇ ವಸಂತಕ್ಕೆ ಕಾಲಿಡಲಿದ್ದಾರೆ. ಇನ್ನು, ಅವರ ಸ್ವಂತ ಬ್ಯಾನರ್ ಪಿಆರ್​ಕೆ ಪ್ರೊಡಕ್ಷನ್​ನಲ್ಲಿ 4 ಸಿನಿಮಾಗಳ ಕೆಲಸ ನಡೆಯುತ್ತಿದೆ. ಏ.12ಕ್ಕೆ ಪುನೀತ್ ನಿರ್ವಣದ ಮೊದಲ ಚಿತ್ರ ‘ಕವಲುದಾರಿ’ ತೆರೆಗೆ ಬರಲಿದೆ.

 ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬವನ್ನು (ಮಾ.17) ಸಂಭ್ರಮಿಸಲು ಕಾದು ಕೂತಿದ್ದ ಅಭಿಮಾನಿ ಬಳಗದ ಪಾಲಿಗೆ ಈ ದಿನ ಹಬ್ಬಕ್ಕೆ ಸಮಾನ. ಅಪು್ಪ ಮನೆ ಮುಂದೆ ಸಾವಿರಾರು ಜನರು ಭಾನುವಾರ ಜಮಾಯಿಸಲಿದ್ದಾರೆ. ಹಾರ, ಕೇಕ್, ಉಡುಗೊರೆ ತರಬೇಡಿ ಎಂದು ಪುನೀತ್ ಮನವಿ ಮಾಡಿಕೊಂಡಿರುವುದರಿಂದ ಬರ್ತ್​ಡೇ ಆಚರಣೆ ಸರಳವಾಗಿ ನಡೆಯಲಿದೆ. ಆದರೆ ಅವರು ತೊಡಗಿಕೊಂಡಿರುವ ಸಿನಿಮಾ ತಂಡಗಳಿಂದ ಭರ್ಜರಿ ಗಿಫ್ಟ್ ಸಿಗಲಿದೆ. ಮೋಷನ್ ಪೋಸ್ಟರ್, ಫಸ್ಟ್​ಲುಕ್ ಮತ್ತು ವಿಶೇಷ ಹಾಡಿನ ಮೂಲಕ ಜನ್ಮದಿನವನ್ನು ಆಚರಿಸಲು ನಿರ್ದೇಶಕರು ಯೋಜನೆ ರೂಪಿಸಿದ್ದಾರೆ. ಸಂತೋಷ್ ಆನಂದ್​ರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಯುವರತ್ನ’

LEAVE A REPLY

Please enter your comment!
Please enter your name here