ಹಾವೇರಿ: ಫೆಬ್ರವರಿ ಎರಡನೆಯ ವಾರ ಹತ್ತಿರವಾಗುತ್ತಲೇ ಪ್ರೇಮಿಗಳ ಮನದಲ್ಲಿ ಕಚಗುಳಿ ಆರಂಭವಾಗುತ್ತದೆ. ವರ್ಷ ಪೂರ್ತಿ ಪ್ರೇಮಿಗಳಾಗಿದ್ದರೂ ಫೆಬ್ರವರಿ 14 ಪ್ರೇಮಿಗಳಿಗೆ ವಿಶೇಷ ದಿನವಾಗಿದ್ದು, ನಾನಾ ಉಡುಗೊರೆಗಳೊಂದಿಗೆ ತಮ್ಮ ಪ್ರೇಮ ನಿವೇದನೆಯನ್ನು ಹಂಚಿಕೊಳ್ಳಲು ಜಿಲ್ಲಾದ್ಯಂತ ಪ್ರೇಮಿಗಳು ಸಿದ್ಧರಾಗಿದ್ದಾರೆ.

ಗುರುವಾರ ಪ್ರೇಮಿಗಳ ಪಾಲಿಗೆ ಅಕ್ಷ ರಶಃ ಒಲವಿನ ವಾರವಾಗುವಂತೆ ಕಂಡುಬರುತ್ತಿದೆ. ತಮ್ಮದೇ ರೀತಿಯಲ್ಲಿ ವ್ಯಾಲೆಂಟೈನ್ಸ್‌ ಡೇ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇಡೀ ದಿನ ಪ್ರೇಮ: 
ಇಂದಿನ ದಿನ ‘ಪೂರ್ತಿ’ ಪ್ರೇಮಿಗೆ ಮೀಸಲು. ಬೆಳಗ್ಗೆ ಎದ್ದ ಕೂಡಲೇ ಒಲುಮೆಯ ಶುಭಾಶಯ, ಒಲವಿನ ಉಡುಗೊರೆ ಆರಂಭಗೊಂಡು ತಿಂಡಿ, ಊಟ, ಆಟ, ಸುತ್ತಾಟ, ಪಾರ್ಕ್‌, ರೆಸ್ಟೋರೆಂಟ್‌, ಮಾಲ್‌, ಥಿಯೇಟರ್‌ಗಳಿಗೆ ತೆರಳಿ.. ಪಕ್ಕದ ಊರಿಗೊಂದು ಟ್ರಿಪ್‌ ಹೊಡೆದು, ಏಕಾಂತದಲ್ಲಿ ಕೂತು ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಯುವ ಮನಸ್ಸುಗಳು ಹಾತೊರೆಯುತ್ತಿವೆ. ಮನಸ್ಸಿನಲ್ಲಿ ಇಷ್ಟೊಂದು ಯೋಚನೆಗಳನ್ನು ಹೊತ್ತಿರುವ ಪ್ರೇಮಿಗಳಿಗೆ ಈ ಒಂದು ದಿನ ಸಾಕಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಪ್ರೇಮಿಗಳು ವ್ಯಾಲೆಂಟೈನ್ಸ್‌ ಡೇಗೆ ಸಿದ್ಧರಾಗಿದ್ದಾರೆ.

ಗಮನ ಸೆಳೆಯುವ ಗಿರ್ಫ್ಟ್‌ಗಳು: ನಗರದ ಗಿಫ್ಟ್‌ ಅಂಗಡಿಗಳಲ್ಲಿ ಕಪಲ್ಸ್‌, ಸೇಪ್‌ ಡಾಲ್‌, ಹಾರ್ಟ್‌ ಸೇಪ್‌ ಚಾಕಲೇಟ್‌, ಲವ್‌ ಮಗ್ಸ್‌, ಪೀಫಲ್ಸ್‌, ಲವ್‌ ಕೀ ಚೈನ್‌, ಹಾರ್ಟ್‌ ಸೇಪ್‌ ಫಿಲೋ, ಲವ್‌ ಗ್ರೀಟಿಂಗ್ಸ್‌ ಕಾರ್ಡ್‌ ಸೇರಿದಂತೆ ಇತರೆ ಒಲವಿನ ಉಡುಗೊರೆಗಳು ಪ್ರೇಮಿಗಳ ಗಮನ ಸೆಳೆಯುವುದರ ಮೂಲಕ ಪ್ರೇಮಿಗಳನ್ನು ಸ್ವಾಗತಿಸುತ್ತಿವೆ.

ಪ್ರೇಮಿಗಳ ಧಾಮ: ಜಿಲ್ಲೆಯಲ್ಲಿ ಉತ್ಸವ ರಾಕ್‌ ಗಾರ್ಡನ್‌, ಅಗಡಿ ತೋಟ, ಬಾಡ, ಕಾಗಿನೆಲೆ, ಹಾವೇರಿ ನಗರದ ಪುರಸಿದ್ದೇಶ್ವರ ಪಾರ್ಕ್‌, ಬಂಕಾಪುರದ ನವಿಲುಧಾಮ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಹೋಗಿ ಪ್ರೇಮಿಗಳು ವ್ಯಾಲೆಂಟೈನ್ಸ್‌ ಡೇ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ, ಕೆಲವು ಕಡೆ ಅವಕಾಶ ನಿಷೇಧಿಸಲಾಗಿದ್ದು, ಜಿಲ್ಲೆಯ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಆಚರಿಸಿಕೊಳ್ಳಲು ಸೂಕ್ತ ಸ್ಥಳಗಳು ಇಲ್ಲದ ಕಾರಣ ಕೆಲವರು ಜಿಲ್ಲೆಯನ್ನು ಬಿಟ್ಟು ಮುರುಡೇಶ್ವರ, ಗೋಕರ್ಣ, ವಂಡರ್‌ ಲಾ ಸೇರಿದಂತೆ ರಾಜ್ಯ ವಿವಿಧ ಪ್ರವಾಸಿ ತಾಣಗಳಿಗೆ ಹೋಗಿ ಪ್ರೇಮಿಗಳ ದಿನಾಚರಣೆಗೆ ಸಿದ್ಧರಾಗಿದ್ದಾರೆ.

ಪ್ರೇಮಿಗಳಿಗೆ ಕಾಯುತ್ತಿವೆ ಅಂಗಡಿ: ನಗರದಲ್ಲಿ ಬಟ್ಟೆ ಅಂಗಡಿಗಳು, ಬೇಕರಿ ಅಂಗಡಿಗಳು ಬಗೆಬಗೆಯ ಕೇಕ್‌, ವಿವಿಧ ರೀತಿಯ ಫ್ಯಾಷನ್ಸ್‌, ಉಡುಪು ಮತ್ತು ಜ್ಯುವೆಲ್ಲರಿ ಅಂಗಡಿಗಳು ಪ್ರೇಮಿಗಳಿಗೆ ಕಾಯುತ್ತಿವೆ. ಪ್ರೇಮಿಗಳ ದಿನಕ್ಕೆ ಬೆಲೆಬಾಳುವ ಉಡುಪು, ಚಿನ್ನ, ಬೆಳ್ಳಿ, ವಜ್ರಾಭರಣಗಳ ಉಡುಗೊರೆ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಹಾಗಾಗಿ ಜ್ಯುವೆಲ್ಲರಿ ಅಂಗಡಿಗಳು ಪ್ರೇಮಿಗಳ ದಿನಕ್ಕೂ ಅಕ್ಷ ಯ ತದಿಗೆಯಂತೆ ಸಿದ್ಧವಾಗಿವೆ. ಮತ್ತೂಂದೆಡೆ ಗುಲಾಬಿ ಹೂವಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರಕ್ಕೆ ಪ್ರೇಮಿಗಳಂತೆಯೇ ಕಾದು ಕುಳಿತಿದ್ದಾರೆ. ಈ ಬಾರಿ ಗುಲಾಬಿಗೆ ಬೇಡಿಕೆ ಹೆಚ್ಚಾಗಿದೆ. ಗುಲಾಬಿ ಪೂರೈಕೆ ಹೆಚ್ಚಿರುವುದರಿಂದ ಪ್ರೇಮಿಗಳು ತಮಗೆ ಬೇಕಾದ ರೀತಿಯ ಗುಲಾಬಿ ಮಾರುಕಟ್ಟೆಯಲ್ಲಿ ಆರಿಸಿಕೊಳ್ಳಬಹುದು ಎನ್ನುತ್ತಾರೆ ಗುಲಾಬಿ ಹೂವಿನ ವ್ಯಾಪಾರಿಗಳು.

Summary
ಹಾವೇರಿ : ಒಲವಿನ ದಿನ, ಪ್ರೇಮಿಗಳ ರೋಮಾಂಚನ
Article Name
ಹಾವೇರಿ : ಒಲವಿನ ದಿನ, ಪ್ರೇಮಿಗಳ ರೋಮಾಂಚನ
Description
ಗುಲಾಬಿ ಪೂರೈಕೆ ಹೆಚ್ಚಿರುವುದರಿಂದ ಪ್ರೇಮಿಗಳು ತಮಗೆ ಬೇಕಾದ ರೀತಿಯ ಗುಲಾಬಿ ಮಾರುಕಟ್ಟೆಯಲ್ಲಿ ಆರಿಸಿಕೊಳ್ಳಬಹುದು ಎನ್ನುತ್ತಾರೆ ಗುಲಾಬಿ ಹೂವಿನ ವ್ಯಾಪಾರಿಗಳು. 

LEAVE A REPLY

Please enter your comment!
Please enter your name here