ಪ್ರಯಾಗರಾಜ್: ವಸಂತ ಪಂಚಮಿ ಹಿನ್ನೆಲೆಯಲ್ಲಿ 2.3 ಕೋಟಿಗೂ ಅಧಿಕ ಭಕ್ತರು ಭಾನುವಾರ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಶನಿವಾರ ಮಧ್ಯಾಹ್ನವೇ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಭಾನುವಾರ ಮಧ್ಯರಾತ್ರಿ 12 ಗಂಟೆ ಬಳಿಕ ಸಂಗಮದಲ್ಲಿ ಕೋಟ್ಯಂತರ ಜನ ನೆರೆದಿದ್ದರು. ಭಾನುವಾರ ಸಂಜೆವರೆಗೂ ಸಾಲು ಸಾಲಿನಲ್ಲಿ ಬಂದು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಸಂಜೆ ವೇಳೆಗೆ ಸುಮಾರು 2.3 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಬಾರಿಯ ಕುಂಭಮೇಳದ ಅವಧಿಯಲ್ಲಿ ವಸಂತ ಪಂಚಮಿ ಶುಭ ದಿನವಾಗಿದೆ. ಹೀಗಾಗಿ ಭಕ್ತರ ಸಂಖ್ಯೆ ಸಾಮಾನ್ಯ ದಿನಕ್ಕಿಂತ ದ್ವಿಗುಣ ವಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದರೂ ಯಾವುದೇ ಅವಘಡ ಸಂಭವಿಸದಂತೆ ಉತ್ತರ ಪ್ರದೇಶ ಪೊಲೀಸರು ಎಚ್ಚರಿಕೆ ವಹಿಸಿದ್ದರು. ನಾಳೆ ರಾಹುಲ್ ಪ್ರಿಯಾಂಕಾ?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಫೆ.12ರ ಬೆಳಗ್ಗೆ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಸಾಧ್ಯತೆಯಿದೆ. ಸೋಮವಾರ ಬೆಳಗ್ಗೆ ಉತ್ತರಪ್ರದೇಶಕ್ಕೆ ಆಗಮಿಸಲಿರುವ ರಾಹುಲ್-ಪ್ರಿಯಾಂಕಾ, ರೋಡ್​ಷೋ ಮೂಲಕ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

Summary
2 ಕೋಟಿ ಭಕ್ತರಿಂದ ಪುಣ್ಯಸ್ನಾನ !
Article Name
2 ಕೋಟಿ ಭಕ್ತರಿಂದ ಪುಣ್ಯಸ್ನಾನ !
Description
ಸೋಮವಾರ ಬೆಳಗ್ಗೆ ಉತ್ತರಪ್ರದೇಶಕ್ಕೆ ಆಗಮಿಸಲಿರುವ ರಾಹುಲ್-ಪ್ರಿಯಾಂಕಾ, ರೋಡ್​ಷೋ ಮೂಲಕ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

LEAVE A REPLY

Please enter your comment!
Please enter your name here