ಬೆಂಗಳೂರು : ‘ಸುಮಾರು 10 ವರ್ಷದ ನಂತರ ಈ ದಿಗ್ಗಜನ ಜತೆ ನಟಿಸುವ ಅವಕಾಶ ಮತ್ತೆ ಒದಗಿಬಂತು. ತಮ್ಮ ಜೀವನದ ಬಹುಪಾಲು ಸಮಯವನ್ನು ಸಿನಿಮಾ ಕ್ಷೇತ್ರಕ್ಕಾಗಿ ಮೀಸಲಿಟ್ಟು, ನಮ್ಮನ್ನೆಲ್ಲ ರಂಜಿಸಿದ ಲೆಜೆಂಡ್ ಇವರು. ಈ ಕ್ಷಣವನ್ನು ಉಡುಗೊರೆಯಾಗಿ ನೀಡಿದ ‘ಸೈರಾ..’ ಚಿತ್ರತಂಡ, ನಿರ್ದೇಶಕ ಸುರೇಂದರ್ ರೆಡ್ಡಿ, ನಿರ್ವಪಕ ರಾಮ್ ಚರಣ್ ತೇಜ ಅವರಿಗೆ ಧನ್ಯವಾದಗಳು’ ಎಂದು ಸುದೀಪ್ ಖುಷಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವುಕು ರಾಜನ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಅವರ ಲುಕ್ ಕೂಡ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಬಹುತಾರಾಗಣದ ಕಾರಣಕ್ಕಾಗಿಯೇ ‘ಸೈ ರಾ..’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ನಾಯಕನಾಗಿ ಚಿರಂಜೀವಿ ನಟಿಸಿದ್ದರೆ ಅವರ ಜತೆಗೆ ಸುದೀಪ್, ನಯನತಾರಾ, ವಿಜಯ್ ಸೇತುಪತಿ, ತಮನ್ನಾ ಭಾಟಿಯಾ, ಅಮಿತಾಭ್, ಜಗಪತಿ ಬಾಬು ಮುಂತಾದವರು ಬಣ್ಣ ಹಚ್ಚಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ತಯಾರಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಅ.19ರಂದು ತೆರೆಕಾಣಲಿದೆ. ಹಾಡುಗಳಿಗೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಕನ್ನಡ ಮಾತ್ರವಲ್ಲದೆ, ಪರಭಾಷಾ ಚಿತ್ರರಂಗದಲ್ಲೂ ಜನಪ್ರಿಯತೆ ಪಡೆದಿದ್ದಾರೆ ‘ಕಿಚ್ಚ’ ಸುದೀಪ್. ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಪ್ರಿಯರಿಗೂ ಅವರ ಹೆಸರು ಪರಿಚಿತ. ರಾಜಮೌಳಿ, ರಾಮ್ೋಪಾಲ್ ವರ್ವ ಮುಂತಾದ ಖ್ಯಾತ ನಿರ್ದೇಶಕರ ಜತೆ ಕೆಲಸ ಮಾಡಿದ್ದು ಸುದೀಪ್ ಹೆಚ್ಚುಗಾರಿಕೆ. 2008ರಲ್ಲಿ ತೆರೆಕಂಡ ‘ಫೂಂಕ್’ ಚಿತ್ರದ ಮೂಲಕ ಅವರು ಬಾಲಿವುಡ್​ಗೆ ಕಾಲಿಟ್ಟರು. ಬಳಿಕ 2010ರಲ್ಲಿ ‘ರಣ್’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಒದಗಿಬಂತು. ಅದಾಗಿ ಹಲವು ವರ್ಷಗಳ ಬಳಿಕ ಮತ್ತೆ ಬಿಗ್-ಬಿ ಜತೆ ಸುದೀಪ್ ನಟಿಸಿದ್ದಾರೆ. ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಇಬ್ಬರೂ ಜತೆಯಾಗಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಅಮಿತಾಭ್ ಜತೆ ಅಭಿಮಾನದಿಂದ ಕ್ಲಿಕ್ಕಿಸಿಕೊಂಡ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ ‘ಕಿಚ್ಚ’.

LEAVE A REPLY

Please enter your comment!
Please enter your name here