ಸದ್ಯ ಬಾಲಿವುಡ್‌ನ ಕ್ಯೂಟೆಸ್ಟ್‌ ಲವರ್ಸ್‌ ಎಂದೇ ಹೇಳಲಾಗುತ್ತಿರುವ ರಣಬೀರ್ ಕಪೂರ್‌ ಹಾಗೂ ಆಲಿಯಾ ಭಟ್ ಮದುವೆ ಯಾವಾಗ ಆಗಲಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ನಟಿ ಕತ್ರೀನಾ ಕೈಫ್‌ ಜೊತೆ ಬ್ರೇಕಪ್‌ ಆದ ಬಳಿಕ ರಣಬೀರ್ ಕಪೂರ್ – ಆಲಿಯಾ ಜೊತೆಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ವೇಳೆಯಲ್ಲಿ ಇವರಿಬ್ಬರಿಗೆ ಪ್ರೇಮಾಂಕುರವಾಗಿದೆ ಎಂದು ತಿಳಿದುಬಂದಿದ್ದು, ಹೀಗಾಗಿ ಈ ಚಿತ್ರ ಬಿಡುಗಡೆಯಾದ ಬಳಿಕವೇ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕ್ಯೂಟ್ ಜೋಡಿ ನ್ಯೂಯಾರ್ಕ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ, ಅಪ್ಪ ರಿಷಿ ಕಪೂರ್‌ ಜೊತೆ ಈ ಜೋಡಿ ಸುತ್ತಾಡಿದ್ದಲ್ಲದೆ ಸೋನಮ್‌ ಕಪೂರ್‌ ಮದುವೆಗೆ ಕೈ ಕೈ ಹಿಡಿದುಕೊಂಡು ಜತೆಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ, ಇನ್ಸ್‌ಟಾಗ್ರಾಮ್‌ನಲ್ಲಿ ರಣಬೀರ್ ಕಪೂರ್ ಹುಟ್ಟುಹಬ್ಬಕ್ಕೆ ರಣಬೀರ್‌ ಕಪೂರ್ ವಿಶೇಷವಾಗಿ ಶುಭವನ್ನೂ ಕೋರಿದ್ದಳು. ಈ ರೀತಿ ಅವರಿಬ್ಬರ ಸಂಬಂಧವನ್ನು ಗಟ್ಟಿಗೊಳಿಸಲು ಹಾಗೂ ಪರ್ಫೆಕ್ಟ್‌ ಕಪಲ್ ಎನಿಸಿಕೊಳ್ಳಲು ಆಲಿಯಾ ಭಟ್ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾಳೆ. ಬರ್ಫಿ ಖ್ಯಾತಿಯ ರಣಬೀರ್ ಕಪೂರ್ ಸಹ ಆಲಿಯಾ ಜೊತೆ ಮದುವೆಯಾಗಲು ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಅವರಿಬ್ಬರೂ ಜೂನ್‌ನಲ್ಲಿ ಉಂಗುರ ಬದಲಾಯಿಸಿಕೊಳ್ಳಲಿ ಎಂದು ರಣಬೀರ್ ತಾಯಿ ನೀತು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಫಿಲ್ಮ್‌ಫೇರ್‌ ವರದಿ ಮಾಡಿದೆ. ಆದರೆ, ಆಯನ್ ಮುಖರ್ಜಿ ನಿರ್ದೇಶನದ ಚಿತ್ರ ಬ್ರಹ್ಮಾಸ್ತ್ರ ಬಿಡುಗಡೆಯವರೆಗೆ ಅವರು ಎಂಗೇಜ್‌ ಆಗುವುದು ಅನುಮಾನ ಎನ್ನಲಾಗುತ್ತಿದೆ. ಬ್ರಹ್ಮಾಸ್ತ್ರ ಚಿತ್ರದಲ್ಲಿ ಅಮಿತಾಬ್ ಬಚ್ಚನ್‌ ಸಹ ನಟಿಸಿದ್ದು, ಆ ಚಿತ್ರ ಡಿಸೆಂಬರ್ 20, 2019ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಹಿನ್ನೆಲೆ, ಇತ್ತೀಚೆಗಷ್ಟೇ ದೀಪಿಕಾ – ರಣವೀರ್, ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್ ಮುಂತಾದ ಬಾಲಿವುಡ್‌ ನಟರ ಅದ್ಧೂರಿ ಮದುವೆಯ ಬಳಿಕ ಈಗ ಈ ಜೋಡಿಯ ಮದುವೆಗೆ ಬಾಲಿವುಡ್ ನಟ – ನಟಿಯರು ಹಾಗೂ ರಣಬೀರ್ – ಆಲಿಯಾ ಹಾಗೂ ಹಿಂದಿ ಚಿತ್ರದ ಅಭಿಮಾನಿಗಳು ಮತ್ತೊಂದು ಸೆಲೆಬ್ರಿಟಿಗಳ ಮದುವೆಗೆ ಎದುರು ನೋಡುತ್ತಿದ್ದಾರೆ.

Summary
2019ರಲ್ಲೇ ನಡೆಯಲಿದ್ಯಾ Ranbir Kapoor And Alia Bhatt ಎಂಗೇಜ್‌ಮೆಂಟ್‌?
Article Name
2019ರಲ್ಲೇ ನಡೆಯಲಿದ್ಯಾ Ranbir Kapoor And Alia Bhatt ಎಂಗೇಜ್‌ಮೆಂಟ್‌?

LEAVE A REPLY

Please enter your comment!
Please enter your name here