ಹಾಸನ: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರಿಗೆ 9ರ ಸಂಖ್ಯೆ ಆಗಲ್ಲ. ಹೀಗಾಗಿ 1989, 1999ರ ಚುನಾವಣಾ ಫಲಿತಾಂಶವೇ 2019 ರಲ್ಲಿ ಪುನರಾವರ್ತನೆ ಆಗಲಿದೆ ಎಂದು ಮಾಜಿ ಸಚಿವ ಎ.ಮಂಜು ಭವಿಷ್ಯ ನುಡಿದಿದ್ದಾರೆ.

ಭಾನುವಾರ ಹಾಸನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸಂಖ್ಯಾಶಾಸ್ತ್ರ ಹೇಳಿದ್ದಾರೆ. ದೇವೇಗೌಡರಿಗೆ 9ರ ಸಂಖ್ಯೆ ಆಗಿ ಬರಲ್ಲ. 1989 ಮತ್ತು 1999ರ ಚುನಾವಣೆಯಲ್ಲಿ ದೇವೇಗೌಡರು ಸೋತಿದ್ದರು, ಈಗ 2019 ರಲ್ಲೂ ದೇವೇಗೌಡರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳುವ ಮೂಲಕ ಗೌಡರಿಗೆ ಒಂಭತ್ತರ ಭಯ ಹುಟ್ಟಿಸಿದ್ದಾರೆ.

ಖರ್ಗೆಯನ್ನೇ ಸಿಎಂ ಮಾಡಿ ಎಂದು ಹೇಳಿದ್ದೆ. ಆದರೆ, ರಾಹುಲ್ ನನ್ನ ಮಗನನ್ನೆ ಸಿಎಂ ಮಾಡಿದರು ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಂಜು, ಈ ನಾಟಕ ಬಿಡಲಿ ಎಂದು ಟಾಂಗ್ ನೀಡಿದರು. ಈಗಲೂ ಖರ್ಗೆ ಅವರನ್ನೇ ಸಿಎಂ ಮಾಡಲಿ, ನಾನು ಹೇಳಿದ ಹಾಗೆ ಕೇಳ್ತಿನಿ ಎಂದರು.

ಇದೇ ಸಂದರ್ಭದಲ್ಲಿ ಮೋದಿ ಹೊಗಳಿದ ಅವರು ನಾನು ಜಿಲ್ಲೆಯಲ್ಲಿ ಅಡ್ಡಾಡಿದ್ದೇನೆ. ಎಲ್ಲಕಡೆ ರಾಷ್ಟ್ರ ಮುಖ್ಯ, ಮೋದಿ ಮುಖ್ಯ ಎಂದು ಮಾತನಾಡುತ್ತಿದ್ದಾರೆ ಎಂದು ಮೊದಲ ಬಾರಿಗೆ ಮೋದಿ ಪರ ಎ.ಮಂಜು ಬ್ಯಾಟಿಂಗ್ ಮಾಡಿದ್ದಾರೆ.

ಈ ಬಾರಿ ಹಾಸನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ದೇವೇಗೌಡರ ಕುಟುಂಬದ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದ ಎ.ಮಂಜು ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಕ್ಕೆ ಬಿಜೆಪಿ ಯಿಂಸ ಸ್ಪರ್ಧೆ ಮಾಡೋ ನಿರ್ಧಾರಕ್ಕೆ ಬಂದಿದ್ದಾರೆ. ಪರಿಣಾಮ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದು ಎಲ್ಲರ ಅಭಿಪ್ರಾಯ ಅಪ್ಪಣೆ ಕೇಳುತ್ತಿದ್ದು, ಮುಂದೆ ಯಾವ ಬೆಳವಣಿಗೆಯಾಗುತ್ತದೆಯೋ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here