ಬೆಂಗಳೂರು

ಡಿಸೆಂಬರ್ 06 : ಭಾರತೀಯ ನೌಕಾಪಡೆ 2500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 30 ಡಿಸೆಂಬರ್ 2018 ಕೊನೆಯ ದಿನವಾಗಿದೆ. ನೌಕಾಪಡೆ 2500 Sailors ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ಪರೀಕ್ಷೆಯನ್ನು ಗಣಿತ ಮತ್ತು ಫಿಸಿಕ್ಸ್ ವಿಷಯದಲ್ಲಿ ಪೂರ್ಣಗೊಳಿಸಿರಬೇಕು. ಕೆಮಿಸ್ಟ್ರಿ, ಬಯೋಲಜಿ, ಕಂಪ್ಯೂಟರ್ ಸೈನ್ಸ್ ಯಾವುದಾದರೂ ಒಂದು ವಿಷಯದಲ್ಲಿ ಬೋರ್ಡ್‌ ಆಫ್‌ ಸ್ಕೂಲ್ ಎಜುಕೇಷನ್‌ ಅನ್ನು ಭಾರತ ಸರ್ಕಾರದ ಎಂಎಚ್‌ಆರ್‌ಡಿ ಯಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1 ಆಗಸ್ಟ್ 1998 ರಿಂದ 31 ಜುಲೈ 2002ರ ನಡುವೆ ಜನಿಸಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳನ್ನು ಕಂಪ್ಯೂಟರ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸ್ಟೇಟ್‌ ವೈಸ್ ಮೆರಿಟ್ ಆಧಾರದ ಮೇಲೆ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here