“ಇಂದಿನ ಯುವಜನತೆ ಇತಿಹಾಸದ ವಿವೇಕಾನಂದರನ್ನು ಸ್ಮರಿಸುವುದು ಮಾತ್ರವಲ್ಲ, ನಾಳಿನ ವಿವೇಕಾನಂದರೂ ಆಗುವ ಪಣ ತೊಡಬೇಕು ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿಮಹತ್ತರ ಪಾತ್ರ ವಹಿಸಬೇಕು. ಆಧುನಿಕ ದಿನದ ಸಮಸ್ಯೆಗಳನ್ನುಹಳೆಯ ಚಿಂತನೆಗಳ ಮೂಲಕ ಪರಿಹರಿಸಲಾಗುವುದಿಲ್ಲ.” “ಭಾರತದ ಜನಸಂಖ್ಯೆಯಲ್ಲಿ ಸುಮಾರು 35% ಇರುವಉತ್ಸಾಹಭರಿತ ಯುವಶಕ್ತಿ ಇಂದು ಬದಲಾವಣೆಯಹರಿಕಾರರಾಗಬೇಕು ” ಎಂದು ಬಿಬಿಎಂಪಿ ಕ್ಯಾಂಪೇನ್ ತಂಡದ ಉಸ್ತುವಾರಿ, ಆಮ್ ಆದ್ಮಿ ಪನಾಯಕಿಕ್ಷದ ಬೆಂಗಳೂರು ಘಟಕದ ಶಾಂತಲಾ ದಾಮ್ಲೆ ಕರೆ ನೀಡಿದರು.

ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ, 35 ವರ್ಷದೊಳಗಿನ ಯುವಜನತೆಯ ನೇತೃತ್ವದಲ್ಲಿನಡೆಯಲಿರುವ “ಬೊಂಬಾಟ್ ಬೆಂಗಳೂರು ಶ್ಯಾಡೋಕೌನ್ಸಿಲ್” ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನುಪ್ರಾರಂಭಿಸಿದ್ದು, ಈ ಸಂದರ್ಭದಲ್ಲಿ ದಾಮ್ಲೆ ಮಾತನಾಡುತ್ತಿದ್ದರು.

“ಬೆಂಗಳೂರಿನ ನಾಗರಿಕರು ಅಸಮರ್ಥ ಆಡಳಿತ ಮತ್ತು ಭ್ರಷ್ಟಾಚಾರದ ಬೇಗೆಯನ್ನು ಅನುಭವಿಸುತ್ತಿದ್ದಾರೆ. ಕಸ, ಸಂಚಾರದಟ್ಟಣೆ, ಪರಿಸರ ಮಾಲಿನ್ಯ, ನಶಿಸುತ್ತಿರುವ ಕೆರೆಗಳು ಮುಂತಾದ ಅನೇಕ ಸಮಸ್ಯೆಗಳನ್ನು ಎಲ್ಲಾ ಪಕ್ಷಗಳು ನಿರ್ಲಕ್ಷ್ಯಿಸುತ್ತಲೇ ಬಂದಿವೆ. ಅನೇಕ ಯುವಕರು ಪ್ರಾಣ ತೆತ್ತಸಂದರ್ಭಗಳೂ ಇವೆ. ಸೇವಿಸುವ ಗಾಳಿ ಮತ್ತು ಕುಡಿಯುವ ನೀರಿನ ಮಾಲಿನ್ಯದಿಂದ ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ನಿರಂತರ ದಾಳಿಗೊಳಗಾಗಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

“ಇದಕ್ಕೆ ವ್ಯತಿರಿಕ್ತವಾಗಿ, ಪ್ರಾಮಾಣಿಕತೆ, ಬದ್ಧತೆ, ಹೊಸಚಿಂತನೆಗಳು ಮತ್ತು ರಾಜಕೀಯ ಇಚ್ಛಾಶಕ್ತಿ ಒಂದಾದಲ್ಲಿ ಕೇವಲ 4 ವರ್ಷಗಳಲ್ಲಿ ಏನೆಲ್ಲಾ ಸಾಧಿಸಬಹುದು ಎಂದು ದೆಹಲಿಯಲ್ಲಿ ಆಪ್ ಸರ್ಕಾರ ತೋರಿಸಿದೆ. ಈ ಸಾಧನೆಯಲ್ಲಿ ಸ್ಥಳೀಯ ಆಡಳಿತದಲ್ಲಿ ನಾಗರಿಕರ, ಅದರಲ್ಲೂ ಯುವಜನತೆಯ, ಭಾಗವಹಿಸುವಿಕೆಯೂ ಪ್ರಮುಖ ಕಾರಣ. ನಮ್ಮ ಕನಸು ಮತ್ತುಗುರಿ “ಬೊಂಬಾಟ್ ಬೆಂಗಳೂರು”. ಬಿಬಿಎಂಪಿ ಯಿಂದಪ್ರಾರಂಭಿಸಿ, ಬೆಂಳೂರಿನ ಆಡಳಿತ ವ್ಯವಸ್ಥೆಯನ್ನು ನವೀಕರಿಸುವುದು” ಎಂದು ಅವರು ಹೇಳಿದರು.

Summary
AAP ನಾಯಕಿ ಶಾಂತಲಾ ದಾಮ್ಲೆ ಕರೆ
Article Name
AAP ನಾಯಕಿ ಶಾಂತಲಾ ದಾಮ್ಲೆ ಕರೆ
Description
"ಬೆಂಗಳೂರಿನ ನಾಗರಿಕರು ಅಸಮರ್ಥ ಆಡಳಿತ ಮತ್ತು ಭ್ರಷ್ಟಾಚಾರದ ಬೇಗೆಯನ್ನು ಅನುಭವಿಸುತ್ತಿದ್ದಾರೆ. ಕಸ, ಸಂಚಾರದಟ್ಟಣೆ, ಪರಿಸರ ಮಾಲಿನ್ಯ, ನಶಿಸುತ್ತಿರುವ ಕೆರೆಗಳು ಮುಂತಾದ ಅನೇಕ ಸಮಸ್ಯೆಗಳನ್ನು ಎಲ್ಲಾ ಪಕ್ಷಗಳು ನಿರ್ಲಕ್ಷ್ಯಿಸುತ್ತಲೇ ಬಂದಿವೆ. ಅನೇಕ ಯುವಕರು ಪ್ರಾಣ ತೆತ್ತಸಂದರ್ಭಗಳೂ ಇವೆ. ಸೇವಿಸುವ ಗಾಳಿ ಮತ್ತು ಕುಡಿಯುವ ನೀರಿನ ಮಾಲಿನ್ಯದಿಂದ ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ನಿರಂತರ ದಾಳಿಗೊಳಗಾಗಿದೆ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here