ಬೆಂಗಳೂರು: ಇಂಟರ್‌ನೆಟ್‌ ಜಾಲಾಡುತ್ತಿದ್ದರೆ ಫೇಸ್‌ಬುಕ್ ಇಲ್ಲವೆ ಟ್ವಿಟರ್‌ನಲ್ಲಿ ನೀವೊಂದು ವಿಡಿಯೋ ಗಮನಿಸಿರಬಹುದು.

ಕೇರಳದ ಕೊಚ್ಚಿಯಲ್ಲಿ ಟೀ ಅಂಗಡಿ ಹೊಂದಿರುವ ವೃದ್ಧ ದಂಪತಿ, ತಮ್ಮ ಗಳಿಕೆ, ಉಳಿಕೆ ಮತ್ತು ಬ್ಯಾಂಕ್ ಸಾಲದ ನೆರವಿನಿಂದ ಜಗತ್ತಿನ ಸುಮಾರು 20ಕ್ಕೂ ಅಧಿಕ ರಾಷ್ಟ್ರಗಳನ್ನು ಸಂದರ್ಶಿಸಿದ ಕಥೆ.

ವಿಜಯನ್ ಮತ್ತು ಮೋಹನ ದಂಪತಿಯ ಕೊಚ್ಚಿಯ ಶ್ರೀ ಬಾಲಾಜಿ ಟೀ ಸ್ಟಾಲ್ ಕೊಚ್ಚಿಗೆ ಭೇಟಿ ನೀಡುವ ಬಹುತೇಕ ಎಲ್ಲರಿಗೂ ಪರಿಚಿತ. ದಂಪತಿ ಟೀ ಅಂಗಡಿ ನಡೆಸುತ್ತಾ, ಉಳಿತಾಯದ ಹಣ ಜತೆಗೆ, ಬ್ಯಾಂಕ್ ನೆರವಿನಿಂದ ಜಗತ್ತು ಸುತ್ತುತ್ತಾರೆ.

ಇವರ ಬಗ್ಗೆ ಟ್ರಾವೆಲ್ ಬ್ಲಾಗರ್ ಡ್ರ್ಯೂ ಬಿನ್ಸಿ, ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ದಂಪತಿ ಟ್ರಾವೆಲಿಂಗ್ ಜತೆಗೆ, ಅಲ್ಲಿ ಎಷ್ಟು ಸರಳವೋ, ಅಷ್ಟು ಸರಳವಾಗಿ ಜೀವನ ನಡೆಸುತ್ತಾರೆ. ಇವರ ಸಾಧನೆ ನೋಡಿದ ಮತ್ತು 70ರ ವಯಸ್ಸಿನಲ್ಲೂ ಕೆಲಸ ಮಾಡಿ, ಜಗತ್ತು ಸುತ್ತುವ ಉತ್ಸಾಹ ನೋಡಿದ ಮಹೀಂದ್ರಾ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ, ದಂಪತಿ ಕುರಿತು ಟ್ವೀಟ್ ಮಾಡಿ, ಮುಂದಿನ ಬಾರಿ ಕೊಚ್ಚಿಗೆ ಭೇಟಿ ನೀಡಿದಾಗ ಖಂಡಿತವಾಗಿ ಅವರ ಟೀ ಅಂಗಡಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಜತೆಗೆ ಸ್ವಾಭಿಮಾನಿ ಜೀವನ ನಡೆಸುತ್ತಿರುವ, ಅವರನ್ನು ಶ್ಲಾಘಿಸಿರುವ ಆನಂದ್, ಈ ದಂಪತಿ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರಬಹುದು. ಆದರೆ ಅವರು ದೇಶದ ಶ್ರೀಮಂತ ದಂಪತಿ.
ಅವರ ವಿವಾಹ ವಾರ್ಷಿಕೋತ್ಸವಕ್ಕೆ ಪುಟ್ಟ ಉಡುಗೊರೆಯಾಗಿ ನಮ್ಮ ಕಡೆಯಿಂದ ವಿದೇಶ ಪ್ರವಾಸವೊಂದನ್ನು ನೀಡುವುದಾಗಿ ಹೇಳಿದ್ದಾರೆ.
ಆನಂದ್ ಟ್ವೀಟ್ ಮಾಡುತ್ತಿದ್ದಂತೆ, ಹಲವರು ಅದಕ್ಕೆ ದನಿಗೂಡಿಸಿದ್ದು, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Summary
Anand Mahindra: ಜಗತ್ತು ಸುತ್ತುವ ಉತ್ಸಾಹಿ ದಂಪತಿಗೆ ಆನಂದ್ ಮಹೀಂದ್ರಾ ನೆರವು
Article Name
Anand Mahindra: ಜಗತ್ತು ಸುತ್ತುವ ಉತ್ಸಾಹಿ ದಂಪತಿಗೆ ಆನಂದ್ ಮಹೀಂದ್ರಾ ನೆರವು

LEAVE A REPLY

Please enter your comment!
Please enter your name here