ಬೆಂಗಳೂರು : ನಿರ್ಣಾಯಕ ಏಕೈಕ ಪುರುಷರ ಡಬಲ್ಸ್‌ ಪಂದ್ಯದಲ್ಲಿ ವಿಜಯದ ಪತಾಕೆ ಹಾರಿಸಿದ ಬೆಂಗಳೂರು ರಾರ‍ಯಪ್ಟರ್ಸ್‌ ತಂಡ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ವಿರುದ್ಧ ಗೆದ್ದು ಎರಡನೇ ಬಾರಿ ಫೈನಲ್‌ ತಲುಪುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಉಪಾಂತ್ಯ ಹಣಾಹಣಿಯಲ್ಲಿ ಕಿಡಂಬಿ ಶ್ರೀಕಾಂತ್‌ ನೇತೃತ್ವದ ಬೆಂಗಳೂರು ತಂಡ 4-2 ಅಂತರದಿಂದ ಅವಧ್‌ ವಾರಿಯರ್ಸ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಹೆಜ್ಜೆ ಹಾಕಿತು. ಮಿಶ್ರ ಡಬಲ್ಸ್‌ನಲ್ಲಿ ಬೆಂಗಳೂರು ತಂಡ ನಿರಾಸೆ ಅನುಭವಿಸಿದರೂ ಎರಡು ಪುರುಷರ ಸಿಂಗಲ್ಸ್‌ ಪಂದ್ಯಗಳಲ್ಲಿ ಬಿ.ಸಾಯ್‌ ಪ್ರಣೀತ್‌ ಮತ್ತು ಕೆ.ಶ್ರೀಕಾಂತ್‌ ಜಯ ಗಳಿಸಿ ತಂಡದ 2-2ರ ಹೋರಾಟಕ್ಕೆ ಸಾಕ್ಷಿಯಾದರು.

ನಂತರ ನಿರ್ಣಾಯಕ ಹಾಗೂ ಮಹತ್ವದ ಪುರುಷರ ಡಬಲ್ಸ್‌ನಲ್ಲಿ ಮೊಹ್ಮದ್‌ ಅಹ್ಸನ್‌ ಮತ್ತು ಎಚ್‌. ಸೆಟಿವಾನ್‌ ಜೋಡಿ 15-14, 15-9ರಲ್ಲಿ ವೈ. ಲೀ ಮತ್ತು ಮಥಾಯಿಸ್‌ ಕ್ರಿಸ್ಟೀಯಾನ್ಸೆನ್‌ ಜೋಡಿ ವಿರುದ್ಧ ಜಯದ ನಗೆ ಬೀರುವುದರೊಂದಿಗೆ ಮಹಿಳಾ ಸಿಂಗಲ್ಸ್‌ ಬಾಕಿ ಇರುವಂತೆಯೇ ತಂಡದ ಗೆಲವನ್ನು ಖಚಿತಪಡಿಸಿದರು.

ಕಳೆದ ಬಾರಿ ರನ್ನರ್‌ ಅಪ್‌ ಆಗಿದ್ದ ಬೆಂಗಳೂರು ತಂಡ ಪ್ರಶಸ್ತಿಗಾಗಿ ಇದೇ 13ರಂದು ಶನಿವಾರ 2ನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿರುವ ಹೈದರಾಬಾದ್‌ ಹಂಟರ್ಸ್‌ ಮತ್ತು ಮುಂಬಯಿ ರಾಕೆಟ್ಸ್‌ ನಡುವಿನ ವಿಜೇತರನ್ನು ಎದುರಿಸಲಿದೆ.

Summary
Bengaluru: ಫೈನಲ್‌ಗೆ ಬೆಂಗಳೂರು ರಾರ‍ಯಪ್ಟರ್ಸ್‌
Article Name
Bengaluru: ಫೈನಲ್‌ಗೆ ಬೆಂಗಳೂರು ರಾರ‍ಯಪ್ಟರ್ಸ್‌

LEAVE A REPLY

Please enter your comment!
Please enter your name here