ಸೂಪರ್ ಹಿಟ್ ಟಗರು ಚಿತ್ರದಲ್ಲಿನ ಡಾಲಿ ಪಾತ್ರದಿಂದ ಖ್ಯಾತಿಯಾಗಿರುವ ಧನಂಜಯ್ ಮುಂದಿನ ಚಿತ್ರ ಭೈರವ ಗೀತಾ ಭಾರೀ ನಿರೀಕ್ಷೆ ಮೂಡಿಸಿದೆ.
ಯುವ ನಿರ್ದೇಶಕ ಸಿದ್ಧಾರ್ಥ ಟಾತೊಳ್ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ನಿರ್ದೇಶಿಸಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿ ಆವೃತ್ತಿಯಲ್ಲಿ ಮೂಡಿಬರುತ್ತಿದೆ.

ಸಿನಿಮಾವೊಂದರ ಯಶಸ್ಸಿಗೆ ಪಟ್ಟ ಶ್ರಮದ ಬೆನ್ನಲ್ಲೇ ಹೆಸರು, ಹಣ ಎಲ್ಲವೂ ದೊರೆಯುವ ಅವಕಾಶ ಇರುತ್ತದೆ ಎನ್ನುವ ಧನಂಜಯ್, ಜನರು ತಮ್ಮನ್ನು ನಟನಾಗಿ ಗುರುತಿಸಿದ್ದಾರೆ. ಇದಷ್ಟೆ ಸಾಕು ಎನ್ನುತ್ತಾರೆ.
ಭೈರವ ಗೀತಾ ಅನಿರೀಕ್ಷಿತವಾಗಿ ಬಂದದ್ದು, ರಾಮ್ ಗೋಪಾಲ್ ವರ್ಮಾ ಟಗರು ಚಿತ್ರ ವೀಕ್ಷಿಸಿ ಚಿತ್ರವೊಂದಕ್ಕೆ ಅವಕಾಶ ನೀಡುತ್ತಾರೆ ಎಂಬುದು ಗೊತ್ತಿರಲಿಲ್ಲ. ಅದಕ್ಕೂ ಮುಂಚೆ ಅವರನ್ನು ಭೇಟಿ ಕೂಡಾ ಆಗಿರಲಿಲ್ಲ. ಈ ಚಿತ್ರದ ಮೂಲಕ ಕನ್ನಡ ಹಾಗೂ ತೆಲುಗಿನಲ್ಲಿ ಒಂದೊಳ್ಳೆ ಅವಕಾಶ ದೊರತಿದೆ. ಸಿದ್ಧಾರ್ಥ ಅವರು ಅದ್ಬುತವಾಗಿ ಚಿತ್ರ ಮಾಡಿರುವುದಾಗಿ ಧನಂಜಯ್ ಹೇಳಿದ್ದಾರೆ.

ಈ ಚಿತ್ರದ ಮೂಲಕ ಟಾಲಿವುಡ್ ನಲ್ಲಿ ತಾನೂ ಹೆಜ್ಜೆ ಇರಿಸಿದ್ದು, ಚಿತ್ರ ಯಶಸ್ವಿಯಾಗಲಿದೆ ಎಂಬ ಭರವಸೆ ಹೊಂದಿರುವುದಾಗಿ ಹೇಳುವ ಧನಂಜಯ್, ಮತ್ತೊಂದು ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಹೊಸ ಕಲ್ಪನೆಗಳು ಹೊಳೆಯುತ್ತವೆ. ಸಾಕಷ್ಟು ಕಲಿಯುವುದಾಗಿ ಹೇಳಿದ್ದಾರೆ.ಭೈರವ ಗೀತಾ ಹಿಂಸಾತ್ಮಕ ಪ್ರೇಮ ಕಥೆಯಾಗಿದ್ದು, ಧನಂಜಯ್ ಕೂಲಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕಾರ್ಮಿಕ ವರ್ಗ ಹಾಗೂ ಶ್ರಿಮಂತ ವರ್ಗದವರ ನಡುವಿನ ಹೋರಾಟವನ್ನು ಭೈರವ ಗೀತದಲ್ಲಿ ವೈಭವೀಕರಿಸಲಾಗಿದ್ದು, ಇದೊಂದು ಹಿಂಸಾತ್ಮಕ ಪ್ರೇಮ ಕಥೆ ಇರುವ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here