those-who-do-not-have-lunch-are-joining-the-army

ಊಟಕ್ಕೆ ಗತಿ ಇಲ್ಲದವರು ಸೈನ್ಯ ಸೇರುತ್ತಾರೆ: ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಕಟುಟೀಕೆ
ಬೆಂಗಳೂರು: ದೇಶದ ಹೆಮ್ಮೆಯ ಯೋಧರ ಕುರಿತಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಡಿರುವ ಅವಮಾನಕರ ಹೇಳಿಕೆಗೆ ಬಿಜೆಪಿ ಕಟುಟೀಕೆ ವ್ಯಕ್ತಪಡಿಸಿದೆ.
ಭಾಷಣವೊಂದರಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಸೈನ್ಯಕ್ಕೆ ಸೇರುವವರು 2 ಹೊತ್ತಿನ ಊಟಕ್ಕೆ ಗತಿ ಇಲ್ಲದವರು. ಅಂತಹವರನ್ನು ಪ್ರಧಾನಿ ಮೋದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ಸೈನಿಕರಿಗೆ ಅಪಮಾನ ಮಾಡಿದ್ದರು.
ಈ ವಿಚಾರದಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ತಮ್ಮ ಮಗನಿಗೆ ಲೋಕಸಭಾ ಚುನಾವಣಾ ಟಿಕೆಟ್ ಕೊಡಿಸುವಲ್ಲಿ ತೋರಿಸಿದ ಉತ್ಸಾಹವನ್ನು, ದೇಶ ಕಾಯಲು ಆತನನ್ನು ಸೈನ್ಯಕ್ಕೆ ಕಳುಹಿಸುವಲ್ಲಿ ಯಾಕೆ ತೋರಿಸಲಿಲ್ಲ ಎಂದಿದೆ.

those-who-do-not-have-lunch-are-joining-the-army
ಮಾನ್ಯ ಕುಮಾರಣ್ಣ ಅವರೇ, ಊಟಕ್ಕೆ ಗತಿಯಿಲ್ಲದ ಯುವಕರು ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿರುವ ನಿಮಗೆ ನಾಚಿಕೆಯಾಗಬೇಕು. ಯುವಕರು ದೇಶಭಕ್ತಿಯಿಂದ ಸೈನ್ಯಕ್ಕೆ ಸೇರುತ್ತಾರೆಯೇ ಹೊರತು ಯಾವುದೇ ಆಸೆ, ಆಮಿಷಗಳಿಂದಲ್ಲ. ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿದ ನಿಮ್ಮನ್ನು ನಾಡಿನ ಜನತೆ ಕ್ಷಮಿಸಲಾರರು ಎಂದು ಟ್ವೀಟ್ ಮಾಡಿದೆ.

LEAVE A REPLY

Please enter your comment!
Please enter your name here