bs-yeddyurappa-said-that-he-is-a-foolish-chief-minister-and-speaks-to-his-mouth

ಗದಗ: ಲೋಕಸಭಾ ಚುನಾವಣೆ ಅಂಗವಾಗಿ ಪ್ರಚಾರ ಕಾರ್ಯ ಕೈಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಗಜೇಂದ್ರಗಡ ಪಟ್ಟಣದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

bs-yeddyurappa-said-that-he-is-a-foolish-chief-minister-and-speaks-to-his-mouth

ಅವನೊಬ್ಬ ಮೂರ್ಖ ಮುಖ್ಯಮಂತ್ರಿಯಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆ ಎಂದು ಹುಚ್ಚರಂತೆ ಮಾತನಾಡುತ್ತಿದ್ದಾರೆ. ಸೇನೆ, ಸೈನಿಕರ ಬಗ್ಗೆ ಗೌರವ ಇಲ್ಲದೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಮಾದ್ಯಮದವರ ಮೇಲೆ ಹಲ್ಲೆ ಹೇಳಿಕೆ ಅಕ್ಷಮ್ಯ ಅಪರಾಧ. ಗೂಂಡಾಗಿರಿ ನಡೆಸುತ್ತಿದ್ದು, ಇದು ಬಹಳ ದಿನ ನಡೆಯುವುದಿಲ್ಲ. ಚುನಾವಣೆ ಬಳಿಕ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿದರು.ರಾಜ್ಯದ ಜನ ಬಹುಮತ ಕೊಟ್ಟಿಲ್ಲ. ರಾಹುಲ್ ಗಾಂಧಿ ಕೃಪೆಯಿಂದ ಸಿಎಂ ಆಗಿದ್ದೇನೆ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಹಿಗಾಗಿ ಜನರ ಮೇಲೆ ಇವರಿಗೆ ವಿಶ್ವಾಸ ಇಲ್ಲ. ಜನರಿಗೂ ಇವರ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಗೆಲ್ಲಿಸಲು ಜನರು ತಿರ್ಮಾನಿಸಿದ್ದಾರೆ ಎಂದರು.ದೇಶಾದ್ಯಂತ ಮೋದಿ ಅಲೆ ಬೀಸುತ್ತಿದೆ. ರಾಜ್ಯದಲ್ಲಿ ಬಿಜೆಪಿ 22 ಹಾಗೂ ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಚುನಾವಣೆ ನಂತರ ಬಿಎಸ್‌ವೈ ಮೂಲೆಗುಂಪು ಎಂದು ಸಚಿವ ನಾಡಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾಡಗೌಡರು ಜೆಡಿಎಸ್ ಹಾಗೂ ತಮ್ಮ ಬಗ್ಗೆ ಮಾತ್ರ ವಿಚಾರ ಮಾಡಲಿ ನಮ್ಮ ಬಗ್ಗೆ ವಿಚಾರಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here