spokesperson-zorayu-campaign

ಮಂಡ್ಯ- ಪುತ್ರನ ಪರ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಇಳಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಪಕ್ಷೇತರ ಅಭ್ಯಥರ್ಿ ಸುಮಲತಾ ಹೆಸರೇಳದೆ ತಮ್ಮಿಂದ ಸಾಕಷ್ಟು ಸಹಾಯ ಪಡೆದು ವಿಶ್ವಾಸದ್ರೋಹ ಬಗೆದರು ಎಂದು ಜರಿದರು. ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನಲ್ಲಿ ಬುಧವಾರ ವಿಷ್ಣುವರ್ಧನ್ ಅಭಿಮಾನಿಗಳಿಂದ ವಿಷ್ಣು ಸ್ಮಾರಕ ಮಾಡಿಕೊಡುವಂತೆ ಕೋರಿದ ಮನವಿ ಸ್ವೀಕರಿಸಿ ಮಾತನಾಡಿ, ನಿಮಗಿರುವ ಅಭಿಮಾನ ನನ್ನಿಂದ ಸಹಾಯ ಪಡೆದವರಿಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನಾನು ಕಷ್ಟಗಳಿಗೆ ಸ್ಪಂದಿಸಿ ಕಣ್ಣೀರು ಹಾಕಿದರೆ ಮೈಕ್ ಮುಂದೆ ಟವೆಲ್ ಹಿಡಿದು ಕಣ್ಣೀರು ಹಾಕುವ ನಾಟಕ ಅಂತ ರಾಜಕೀಯದಲ್ಲಿ ಅಂಬೆಗಾಲಿಡದ ಮಕ್ಕಳು ಮಾತನಾಡುತ್ತಾರೆ. ನನಗೆ ಯಾವ ಡಿಸಿ ಇದ್ದರೇನು, ಅಧಿಕಾರ ದುರುಪಯೋಗಪಡಿಸಿಕೊಂಡು ಮತ ಹಾಕಿಸಿಕೊಳ್ಳಬೇಕಾ? ಎದುರಾಳಿ ಅಭ್ಯಥರ್ಿ ಸಣ್ಣತನದ ರಾಜಕೀಯ ಮಾಡುತಿದ್ದಾರೆ ಎಂದು ಟೀಕಿಸಿದರು.
ಚಚರ್ೆಗೆ ಸಿದ್ಧ- ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಷ್, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಚರ್ಿಸಲು ನಾನು ಸಿದ್ಧ. ಯಾವ ಸಂದರ್ಭದಲ್ಲಾದರೂ ಚಚರ್ೆಗೆ ಬರುತ್ತೇನೆ ಎಂದರು. ಮಂಡ್ಯದ ಸ್ವಾಭಿಮಾನ ಏನು ಅನ್ನೋದು ಫಲಿತಾಂಶ ಬಂದಾಗ ಗೊತ್ತಾಗುತ್ತದೆ ಎಂದರು.
ಸಾಲಮನ್ನಾ ಮೋಸ- ಸುಮಲತಾ ಅಂಬರೀಷ್ ಬೆಂಬಿಲಿಸಲು ಬೆಳಗಾವಿಯಿಂದ ಬಂದದ್ದೇನೆ. ಸಿಎಂ ಸಾಲಮನ್ನಾ ಹೆಸರಿನಲ್ಲಿ ಮೋಸ ಮಾಡಿದ್ದಾರೆ. ಬ್ಯಾಂಕ್ಗಳಿಂದ ರೈತರ ಮನೆಗಳಿಗೆ ನೋಟೀಸ್ ಬರುತ್ತಿವೆ. ಇಂತಹ ಗಿಮಿಕ್ಗಳಿಗೆ ಮತ್ತೆ ಮರಳಾಗೋದು ಬೇಡ ಎಂದು ರೈತ ಹೋರಾಟಗಾತರ್ಿ ಜಯಶ್ರೀ ಮನವಿ ಮಾಡಿದರು.
ಯಶ್ಗೆ ದಳಪತಿಗಳ ಅಡ್ಡಿ
ಕೆ.ಎಂ.ದೊಡ್ಡಿ- ಸಮೀಪದ ಚಂದೂಪುರ ಗ್ರಾಮದಲ್ಲಿ ನಟ ಯಶ್ ಪ್ರಚಾರ ಸಂದರ್ಭ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಗಲಾಟೆ ನಡೆಸಿ, ಪ್ರಚಾರಕ್ಕೆ ಅಡ್ಡಿ ಪಡಿಸಿದರು. ಮೈತ್ರಿ ಅಭ್ಯಥರ್ಿ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎನ್ನುತಿದ್ದಂತೆ ಸುಮಲತಾ ಬೆಂಬಲಿಗರು ಈ ವಿಚಾರದ ಬಗ್ಗೆ ನಾವು ಮಾತನಾಡೇ ಇಲ್ಲ. ನೀವು ಗೊಂದಲ ಎಬ್ಬಿಸಲು ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಆಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಎರಡು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಆದರೂ ಎರಡೂ ಗುಂಪಿನ ಕಾರ್ಯಕರ್ತರು ಪರ-ವಿರೋಧ ಘೋಷಣೆ ಕೂಗಿದರು.

spokesperson-zorayu-campaign
ಕಾರು ತಪಾಸಣೆ- ನಟ ಯಶ್ ಕಾರನ್ನು ಚುನಾವಣಾಧಿಕಾರಿಗಳು ಕೂಳಗೆರೆ ಗೇಟ್ ಬಳಿ ತಪಾವಣೆ ನಡೆಸಿದರು. ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಯಶ್ ಪ್ರತಿಕ್ರಿಯಿಸಿದರು.

LEAVE A REPLY

Please enter your comment!
Please enter your name here