ಕೆಜಿಎಫ್: ಚಾಪ್ಟರ್ 1′ ಸಿನಿಮಾದ ಬಾಕ್ಸ್ ಆಫೀಸ್ ಅಬ್ಬರ ಕಡಿಮೆಯಾಯಿತೇ? ಈಗಾಗಲೆ ₹ 200 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಸ್ಯಾಂಡಲ್‍ವುಡ್ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದೆ.

ಇದೀಗ ಮೂರನೇ ವಾರದ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಿತ್ರಕ್ಕೆ ಹೊಸ ಸವಾಲು ಎದುರಾಗಿದೆ. ತೆಲುಗಿನ ‘NTR ಕಥಾನಾಯಕುಡು’ ಹಾಗೂ ತಮಿಳಿನಲ್ಲಿ ರಜನಿಕಾಂತ್ ಅಭಿನಯದ ‘ಪೇಟಾ’ ಹಾಗೂ ಅಜಿತ್‌ರ ‘ವಿಶ್ವಾಸಂ’ ಸಿನಿಮಾಗಳು ಕೆಜಿಎಫ್ ಗಳಿಕೆಗೆ ಸ್ವಲ್ಪ ಬ್ರೇಕ್ ಹಾಕಿದಂತಿವೆ. ಹಾಗಾಗಿ ಕೆಜಿಎಫ್ ಕಲೆಕ್ಷನ್ ₹ 250 ಕೋಟಿ ದಾಟುತ್ತದೇ ಇಲ್ಲವೇ ಎಂಬ ಚರ್ಚೆ ಶುರುವಾಗಿದೆ.

ಬಿಡುಗಡೆಯಾದ ದಿನವೇ ಶಾರುಖ್ ಖಾನ್ ಅಭಿನಯದ ‘ಝೀರೋ’ ಚಿತ್ರದ ಜತೆಗೆ ಬಾಲಿವುಡ್‌ನಲ್ಲಿ ಬಿಗ್ ಫೈಟ್ ನೀಡಿತ್ತು ಕೆಜಿಎಫ್. ಆದರೆ ಝೀರೋ ನಿರೀಕ್ಷಿಸಿದ ಮಟ್ಟದಲ್ಲಿ ಮುನ್ನುಗ್ಗದ ಕಾರಣ ಕೆಜಿಎಫ್‌ ದಾರಿ ಸುಗಮವಾಯಿತು. ಇನ್ನು ಎರಡನೇ ವಾರದಲ್ಲಿ ಒಂದಷ್ಟು ಚಿತ್ರಗಳು ಪ್ರತಿಸ್ಪರ್ಧಿಯಾದವು. ಅವುಗಳಲ್ಲಿ ಮುಖ್ಯವಾಗಿ ರಣವೀರ್ ಸಿಂಗ್ ಅಭಿನಯದ ‘ಸಿಂಬಾ’ ಒಂದು. ಇನ್ನು ತೆಲುಗಿನಲ್ಲಿ ತೆರೆಕಂಡ ಅಂತರಿಕ್ಷಂ, ಪಡಿಪಡಿ ಲೇಚೆ ಮನಸು ಚಿತ್ರಗಳು ಅಂತಹ ಸ್ಪರ್ಧೆ ಒಡ್ಡಲಿಲ್ಲ.

ಇದೀಗ ಮೂರನೇ ವಾರದಲ್ಲಿ ಸ್ಪರ್ಧೆ ತೀವ್ರವಾಗಿದೆ. ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’, ಸಿಂಬಾ, ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ವಿನಯ ವಿಧೇಯಕ ರಾಮದಂತಹ ಬಹುನಿರೀಕ್ಷಿತ ಚಿತ್ರಗಳು ತೆರೆಕಂಡಿವೆ. ಹಾಗಾಗಿ ಸಹಜವಾಗಿ ಕೆಜಿಎಫ್ ಅಬ್ಬರಕ್ಕೆ ಬ್ರೇಕ್ ಬಿದ್ದಂತಾಗಿದೆ.

ಇನ್ನೊಂದು ಕಡೆ ಕೆಜಿಎಫ್: ಚಾಪ್ಟರ್ 2 ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಈ ವರ್ಷಾಂತ್ಯಕ್ಕೆ ಅಥವಾ 2020ರ ಆರಂಭದಲ್ಲಿ ತೆರೆಕಾಣುವ ಸಾಧ್ಯತೆಗಳಿವೆ. ಕೆಜಿಎಫ್ ಚಾಪ್ಟರ್ 1ಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರು ಚಾಪ್ಟರ್ 2ರಲ್ಲೂ ಕಾರ್ಯನಿರ್ವಹಿಸಲಿದ್ದಾರೆ. ಸಂಗೀತ ರವಿ ಬಸ್ರೂರು, ಛಾಯಾಗ್ರಹಣ ಭುವನ್ ಗೌಡ, ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ.

Summary
KGF box office collection:- ಎನ್‍ಟಿಆರ್, ಪೇಟಾ ಜತೆಗೆ 'ಕೆಜಿಎಫ್' ಬಾಕ್ಸ್ ಆಫೀಸ್ ಫೈಟ್?
Article Name
KGF box office collection:- ಎನ್‍ಟಿಆರ್, ಪೇಟಾ ಜತೆಗೆ 'ಕೆಜಿಎಫ್' ಬಾಕ್ಸ್ ಆಫೀಸ್ ಫೈಟ್?

LEAVE A REPLY

Please enter your comment!
Please enter your name here