ಬೆಂಗಳೂರು ಮಾಧ್ಯಮ ಲೋಕದ ಅಪರಾಧ ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದ ಪತ್ರಕರ್ತ ಹೇಮಂತ್ ಕಶ್ಯಪ್ ಸದಾಶಿವನಗರದ ವೈದ್ಯ ಡಾ ರಮಣ ರಾವ್ ಅವರಿಗೆ ಕಳೆದ ಮಾರ್ಚ್ 5ರಂದು ಕರೆ ಮಾಡಿ ತಮ್ಮಲ್ಲಿ ಮುಖ್ಯವಾದ ವಿಷಯ ಮಾತನಾಡುವುದಿದೆ ಎಂದಿದ್ದಾನೆ, ಅದಕ್ಕೆ ವೈದ್ಯರು ಕ್ಲಿನಿಕ್ ಗೆ ಬರುವಂತೆ ಸೂಚಿಸಿದರು.

ಪಬ್ಲಿಕ್ ಟಿವಿಯಲ್ಲಿ ಇನ್ ಪುಟ್ ಚೀಫ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಹಕಾರನಗರ ನಿವಾಸಿ ಪತ್ರಕರ್ತ ಹೇಮಂತ್ ಕಶ್ಯಪ್, ನಗರದ ಖ್ಯಾತ ವೈದ್ಯ ಪದ್ಮಶ್ರೀ ಪುರಸ್ಕೃತ ಡಾ ರಮಣ ರಾವ್ ಎಂಬುವವರಿಗೆ ಬೆದರಿಕೆಯೊಡ್ಡಿ 50 ಲಕ್ಷ ರೂಪಾಯಿ ನೀಡುವಂತೆ ಪೀಡಿಸಿದ್ದ ಎಂಬ ನಿಖರ ದೂರಿನ ಮೇಲೆ ಕಳೆದ ಮಂಗಳವಾರ ಸಂಜೆ ಪೊಲೀಸರು ಬಂಧಿಸಿದ್ದರು.

hemanth-kashyap

5 ಮಂದಿ ವರದಿಗಾರರಲ್ಲಿ ನಿಮಗೆ ಸಂಬಂಧಪಟ್ಟ ಸೆಕ್ಸ್ ವಿಡಿಯೊ ಇದ್ದು ಪ್ರತಿಯೊಬ್ಬರಿಗೂ ತಲಾ 10 ಲಕ್ಷ ರೂಪಾಯಿ ನೀಡಬೇಕು. ಇಲ್ಲದಿದ್ದರೆ ಪ್ರಸಾರ ಮಾಡಿಸುತ್ತೇವೆ ಎಂದು ಧಮಕಿ ಹಾಕಿದ್ದನು. ಆತನ ಮಾತಿಗೆ ಕುಗ್ಗಿ ಹೋಗಿ ಡಾ ರಮಣ್ ರಾವ್ 5 ಲಕ್ಷ ರೂಪಾಯಿ ನೀಡಿ ಕಳುಹಿಸಿದ್ದರು. ನಂತರ ಕಳೆದ ಮಂಗಳವಾರ ಸಂಜೆ ಸಮಯ ಟಿವಿಯ ಮಂಜುನಾಥ್ ಮತ್ತು ಛಾಯಾಗ್ರಹಕ ತಮ್ಮ ಸಂಸ್ಥೆಯ ಲೋಗೋ ಹಿಡಿದುಕೊಂಡು ಬಂದು ಅದೇ ವಿಡಿಯೊ ತಮ್ಮ ಬಳಿ ಕೂಡ ಇದೆ ಎಂದು ಬೆದರಿಕೆ ಹಾಕಿದ್ದರು. ಆದರೆ ರಮಣ್ ರಾವ್ ಹಣ ನೀಡಲಿಲ್ಲ. ಒಂದೇ ವಿಷಯದಲ್ಲಿ ಇಬ್ಬಿಬ್ಬರು ಪತ್ರಕರ್ತರು ಬಂದು ತಮಗೆ ಬೆದರಿಕೆ ಹಾಕುತ್ತಿರುವುದು ನೋಡಿ ಸಂಶಯ ಬಂದು ರಮಣ್ ರಾವ್ ವಾಪಸ್ ಕಳುಹಿಸಿದರು.

LEAVE A REPLY

Please enter your comment!
Please enter your name here