former-cm-siddaramaiah-who-has-been-named-mangalarati-who-has-come-to-vote-for-sumalatha-in-my-name

ಮಂಡ್ಯ: ಸಕ್ಕರೆ ನಾಡಿನ ಚುನಾವಣಾ ಕಣಕ್ಕೆ ಪ್ರವೇಶ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಅವರನ್ನು ಸೋಲಿಸುವಂತೆ ಮತದಾರರಿಗೆ ಕರೆ ಕೊಟ್ಟಿದ್ದಾರೆ.ಶುಕ್ರವಾರ ಮಂಡ್ಯದ ನಾಗಮಂಗಲದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಕಾವೇರಿ ಹೋರಾಟದ ವಿಷಯದಲ್ಲಿ ದೇವೇಗೌಡ ಉಪವಾಸ ಸತ್ಯಾಗ್ರಹ ಮಾಡಿದ್ದರು. ಅಂದು ದೇವೇಗೌಡರಿಗೆ ಎಳನೀರು ಕುಡಿಯಿಸಿ‌ ಆಮರಣಾಂತ ಸತ್ಯಾಗ್ರಹವನ್ನು ನಾನು ಕೊನೆಗೊಳಿಸಿದ್ದೆ. ಕಾವೇರಿಗಾಗಿ ದೇವೇಗೌಡರು ಮಾಡಿದ್ದ ಹೋರಾಟ ಅವಿಸ್ಮರಣೀಯ ಎಂದು ಹೊಗಳಿದರು.

former-cm-siddaramaiah-who-has-been-named-mangalarati-who-has-come-to-vote-for-sumalatha-in-my-name

ಮಂಗಳಾರತಿ ಎತ್ತಿ ಕಳುಹಿಸಿ
ಸುಮಲತಾಗೆ ವೋಟ್​ ಹಾಕುವಂತೆ ನಾನು ಹೇಳಿರುವುದಾಗಿ ಹೇಳಿಕೊಂಡು ಕೆಲವರು ತಿರುಗುತ್ತಿದ್ದಾರೆ. ಅಂತಹವರು ಯಾರಾದರೂ ನಿಮ್ಮ ಬಳಿ ಬಂದರೆ ಅವರಿಗೆ ಮಂಗಳಾರತಿ ಎತ್ತಿ ಕಳುಹಿಸಿ, ನಾನು ಅವರಿಗೆ ಬೆಂಬಲ ಕೊಡಿ ಎಂದು ಹೇಳುವ ಪ್ರಶ್ನೆಯೇ ಇಲ್ಲ. ಮಂಗಳಾರತಿ ಬಿಟ್ಟು ನಾನು ಅವರ ವಿರುದ್ಧ ಬೇರೆ ಪದ ಬಳಕೆ ಮಾಡಲು ಬರುವುದಿಲ್ಲ. ಎಲ್.ಆರ್.ಶಿವರಾಮೇಗೌಡ‌ ಬೇಕಿದ್ದರೆ ಬೇರೆ ಪದ ಬಳಕೆ ಮಾಡುತ್ತಾನೆ ಎಂದು ಕಿಚಾಯಿಸಿದರು.

ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಿ‌
ನಮ್ಮ ಸ್ನೇಹಿತರು, ವಿಶ್ವಾಸಿಗಳು, ನಮ್ಮ ಪಕ್ಷದವರು ಯಾರೇ ಏನೇ ಹೇಳಿದರು ಅದನ್ನು ಕೇಳಬೇಡಿ. ನಿಖಿಲ್ ಕುಮಾರಸ್ವಾಮಿಗೆ‌ ಬೆಂಬಲ ಕೊಡಿ. ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಿ‌, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಬಿಜೆಪಿ ಕೋಮುವಾದಿ ಪಕ್ಷ
ಸುಮಲತಾ ಬಿಜೆಪಿ ಅಭ್ಯರ್ಥಿಯೇ. ಹೀಗಾಗಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಅವರಿಗೆ ಮತ ಹಾಕಬಾರದು. ಬಿಜೆಪಿ ಕೋಮುವಾದಿ ಪಕ್ಷ. ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಮೈತ್ರಿ ಮಾಡಿಕೊಂಡಿದ್ದೇವೆ. ನಾಗಮಂಗಲದಲ್ಲಿ ‌ಹೋದ ಚುನಾವಣೆಯಲ್ಲಿ ಬೃಹತ್ ಲೀಡ್ ಕೊಟ್ಟಿದ್ರಿ. ಈ ಬಾರಿ ಅದಕ್ಕಿಂತ ಹೆಚ್ಚು ಲೀಡ್ ಕೊಡ್ಬೇಕು. ಮೈತ್ರಿ ಮಾಡಿಕೊಂಡಾಗ ಬಳ್ಳಾರಿಯಲ್ಲಿ 2 ಲಕ್ಷ, ಮಂಡ್ಯದಲ್ಲಿ 3.50 ಲಕ್ಷ ಅಂತರದಲ್ಲಿ ಗೆದ್ದಿದ್ದೆವು. ಆದರೆ, ಶಿವಮೊಗ್ಗದಲ್ಲಿ ಕೇವಲ 50 ಸಾವಿರ ಅಂತರದಲ್ಲಿ ಮಾತ್ರ ಸೋತಿದ್ದವು ಎಂದು ತಿಳಿಸಿದರು.

ಸುಮಲತಾ ಬಿಜೆಪಿ ಅಭ್ಯರ್ಥಿ
ಬಿಜೆಪಿಯವರು ಪಕ್ಕಾ ಸಂಚು ರೂಪಿಸಿದ್ದಾರೆ. ಹಾಗಾಗಿ ಮಂಡ್ಯದಲ್ಲಿ ಅಭ್ಯರ್ಥಿ ಹಾಕದೆ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಹಾಗಾಗಿಯೇ ಮೋದಿ ಮೈಸೂರಿಗೆ ಬಂದಾಗ ಬಹಿರಂಗವಾಗಿಯೇ ಬೆಂಬಲಿಸಿದ್ದಾರೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿ ಅಲ್ಲ ಬಿಜೆಪಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೇಳಿದರು

LEAVE A REPLY

Please enter your comment!
Please enter your name here