the-arrest-of-two-students-in-the-creation-of-a-counterfeit-questionnaire

ಬೆಂಗಳೂರು: ಸ್ನೇಹಿತನ ದಾರಿ ತಪ್ಪಿಸಲು ಪಿಯುಸಿ ನಕಲಿ ಪ್ರಶ್ನೆಪತ್ರಿಕೆಯನ್ನು ವಾಟ್ಸ್​ಆಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯಾದಗಿರಿ ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಂಜುನಾಥ ಮತ್ತು ಒಬ್ಬ ಅಪ್ರಾಪ್ತನನ್ನು ಸೈಬರ್ ಕ್ರೖೆಂ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಮೂಲದ ಹುಡುಗನೊಬ್ಬ ಬೆಂಗಳೂರಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ. ಮಾ.16ರಂದು ಕನ್ನಡ ಪರೀಕ್ಷೆ ಇತ್ತು. ಸ್ನೇಹಿತ ನಕಲಿ ಪ್ರಶ್ನೆಪತ್ರಿಕೆ ಮೇಲೆ ಅವಲಂಬಿತನಾಗಿ ಫೂಲ್ ಆಗಲಿ ಎಂದು ಅವರು ಈ ಕೃತ್ಯ ಎಸಗಿದ್ದರು.

the-arrest-of-two-students-in-the-creation-of-a-counterfeit-questionnaire

ಅದಕ್ಕಾಗಿ ಪಿಯು ಪರೀಕ್ಷಾ ಮಂಡಳಿ ವೆಬ್​ಸೈಟ್​ಗೆ ತೆರಳಿ 2017ನೇ ಸಾಲಿನ ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಡೌನ್​ಲೋಡ್ ಮಾಡಿ ಸ್ಕಾ್ಯನ್ ಮಾಡಿಕೊಂಡಿದ್ದರು. 2019ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅರ್ಥಶಾಸ್ತ್ರ ಪತ್ರಿಕೆ ಮೇಲಿದ್ದ ಬಾರ್​ಕೋಡ್ ಫೋಟೋ ತೆಗೆದುಕೊಂಡಿದ್ದರು. ಸ್ನಾ್ಯಪ್​ಸೀಡ್ ಆಪ್​ನಲ್ಲಿ ಹಳೇ ಪತ್ರಿಕೆ ಮೇಲೆ 2019ರ ಸಾಲಿನ ಕೋಡ್ ಹಾಗೂ ಇತರ ಮಾಹಿತಿ ಎಡಿಟ್ ಮಾಡಿದ್ದರು. ಅದನ್ನು ಸ್ನೇಹಿತನಿಗೆ ವಾಟ್ಸ್​ಆಪ್ ಮಾಡಿದ್ದರು. ಅದು ರಾಯಚೂರು ಮೂಲದ ವಿದ್ಯಾರ್ಥಿಗೆ ಫಾರ್ವರ್ಡ್ ಆಗಿ ಒಬ್ಬರಿಂದ ಒಬ್ಬರಿಗೆ ತಲುಪಿತ್ತು. ಮಾ.14ಕ್ಕೆ ಸೃಷ್ಟಿಯಾಗಿದ್ದ ನಕಲಿ ಪತ್ರಿಕೆ ಮಾ.15ರ ಮಧ್ಯಾಹ್ನದ ವೇಳೆಗೆ ವೈರಲ್ ಆಗಿತ್ತು. ರಾತ್ರಿ ವೇಳೆಗೆ ಪಿಯು ಅಧಿಕಾರಿಗಳ ಗಮನಕ್ಕೆ ಬಂದು ಬಾರ್​ಕೋಡ್ ಸೇರಿ ಇನ್ನಿತರ ಎಲ್ಲ ಮಾಹಿತಿ ನಿಖರವಾಗಿತ್ತು. ತಕ್ಷಣ ರಾತ್ರೋರಾತ್ರಿ ಪ್ರಶ್ನೆಪತ್ರಿಕೆ ಇರಿಸಿದ್ದ ಖಜಾನೆಗೆ ತೆರಳಿ ಪರಿಶೀಲಿಸಿದಾಗ ಸೋರಿಕೆ ಆಗಿರಲಿಲ್ಲ. ಹಳೇ ಪತ್ರಿಕೆಗಳನ್ನು ಪರಿಶೀಲಿಸಿದಾಗ 2017ರ ಪತ್ರಿಕೆ ಎಂದು ಗೊತ್ತಾಗಿದೆ. ಮಾ.16ರಂದು ಪರೀಕ್ಷೆ ಇದ್ದು, ಅದೇ ದಿನ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಲಾಗಿತ್ತು.

LEAVE A REPLY

Please enter your comment!
Please enter your name here