ದರ್ಶನ್ ತೂಗುದೀಪ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಟ್ರೇಲರ್ ಯೂಟ್ಯೂಬನ್ನೇ ನಡುಗಿಸಿದೆ. ಟ್ರೇಲರ್ ಬಿಡುಗಡೆಯಾದ ಎರಡೇ ದಿನಗಳಲ್ಲಿ ಒಂದು ಕೋಟಿ ವೀಕ್ಷಣೆ ಪಡೆಯುವ ಮೂಲಕ ಸ್ಯಾಂಡಲ್‍ವುಡ್ ಸಿನಿಮಾಗಳ ಖದರ್ ಮತೊಮ್ಮೆ ಏನು ಎಂಬುದನ್ನು ತೋರಿಸಿದಂತಾಗಿದೆ.

ಇಷ್ಟು ದಿನಗಳ ಕಾಲ ಕನ್ನಡ ಸಿನಿಮಾಗಳಿಗೆ ಸೀಮಿತ ಮಾರುಕಟ್ಟೆ ಇತ್ತು. ಆದರೆ ಕೆಜಿಎಫ್: ಚಾಪ್ಟರ್ 1 ಸಿನಿಮಾ ಬಳಿಕ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿದೆ. ಈಗ ಯಾವುದೇ ಸಿನಿಮಾ ಬಂದರೂ ಬೇರೆ ಚಿತ್ರೋದ್ಯಮಗಳು ಗಮನಿಸುವಂತಾಗಿದೆ.

ಇದೀಗ ‘ಯಜಮಾನ’ ಚಿತ್ರವೂ ಭಾರಿ ಸದ್ದು ಮಾಡಿದೆ. ವಿಶೇಷ ಎಂದರೆ ಇದೇ ಮೊದಲ ಸಲ ಕನ್ನಡ ಚಿತ್ರವೊಂದರ ಬಗ್ಗೆ ಯೂಟ್ಯೂಬ್ ಇಂಡಿಯಾ ಟ್ವೀಟ್ ಮಾಡಿರುವುದು. ಇಷ್ಟು ದಿನ ಕನ್ನಡ ಸಿನಿಮಾಗಳೆಂದರೆ ಏನೋ ಒಂದು ರೀತಿ ಅಸಡ್ಡೆ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ ಎಂಬುದಕ್ಕೆ ಇದೇ ನಿದರ್ಶನ.

ನವರಸ ನಾಯಕ ಜಗ್ಗೇಶ್ ಸಹ ಈ ಬಗ್ಗೆ ಟ್ವೀಟ್ ಮಾಡಿ, “ಹೃದಯತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿಕಂಡು.. ಹಾರಲಿ ಏರಲಿ ಕನ್ನಡದ ಬಾವುಟ.. ನಾನು ಚಿತ್ರಮಂದಿರದಲ್ಲೆ ನೋಡಿ ಬೆಂಬಲಿಸುವೆ#ಯಜಮಾನ ” ಎಂದಿದ್ದಾರೆ.
ಯೂಟ್ಯೂಬ್ ಇಂಡಿಯಾ ಯಜಮಾನನ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ದರ್ಶನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ವಿ ಹರಿಕೃಷ್ಣ, ಪಿ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾದ ಪಾತ್ರವರ್ಗದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ದೇವರಾಜ್, ರವಿಶಂಕರ್, ಠಾಕೂರ್ ಅನೂಪ್ ಸಿಂಗ್ ಸೇರಿದಂತೆ ಹಲವಾರು ಮಂದಿಯ ಬಳಗವೇ ಇದೆ.
Summary
Yajamana Trailer Record: 'ಯಜಮಾನ' ಟ್ರೇಲರ್ ಅಬ್ಬರಕ್ಕೆ YouTube ತತ್ತರ !!
Article Name
Yajamana Trailer Record: 'ಯಜಮಾನ' ಟ್ರೇಲರ್ ಅಬ್ಬರಕ್ಕೆ YouTube ತತ್ತರ !!
Description
ನವರಸ ನಾಯಕ ಜಗ್ಗೇಶ್ ಸಹ ಈ ಬಗ್ಗೆ ಟ್ವೀಟ್ ಮಾಡಿ, "ಹೃದಯತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿಕಂಡು.. ಹಾರಲಿ ಏರಲಿ ಕನ್ನಡದ ಬಾವುಟ.. ನಾನು ಚಿತ್ರಮಂದಿರದಲ್ಲೆ ನೋಡಿ ಬೆಂಬಲಿಸುವೆ#ಯಜಮಾನ " ಎಂದಿದ್ದಾರೆ. 

LEAVE A REPLY

Please enter your comment!
Please enter your name here